ಏಪ್ರಿಲ್ 20 ರವೆರೆಗೆ ಕೊಡಗು ಜಿಲ್ಲೆಯ ಪ್ರವಾಸೀ ತಾಣಗಳಿಗೆ ನೋ ಎಂಟ್ರಿ!


ಕೊಡಗು: ಕೋರೋನಾ ಸೋಂಕು ಹೆಚ್ಚುತ್ತಿರುವ ನಿಟ್ಟಿನಲ್ಲಿ ಸೋಂಕು ವ್ಯಾಪಿಸುವಿಕೆ ತಡೆಯಲು ಕೊಡಗು ಜಿಲ್ಲಾಧಿಕಾರಿಗಳು ಏಪ್ರಿಲ್ 20 ರವರೆಗೆ ಕೊಡಗು ಜಿಲ್ಲೆಯ ಎಲ್ಲಾ ಪ್ರವಾಸೀ ತಾಣಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಿಗೆ ಇಂದಿನಿಂದ ಏಪ್ರಿಲ್ 20 ರವೆರೆಗೆ ಸಾವ೯ಜನಿಕರು, ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ. ಆದೇಶ ಉಲ್ಲಂಘನೆಯು ಶಿಕ್ಷಾಹ೯ವಾಗಿರುತ್ತದೆ ಎಂದೂ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

error: Content is protected !!