fbpx

ಏಡಿಗೆ ಡಿಮಾಂಡಪ್ಪೋ ಡಿಮಾಂಡ್!


ಕೊಡಗು: ಆಟಿ 18 ಆಚರಣೆಯಲ್ಲಿರುವ ಕೊಡಗಿನಲ್ಲಿ ಮೈಬೆಚ್ಚಗೆ ಮಾಡಿಕೊಳ್ಳುವ ಆಹಾರ ಸೇವಿಸುತ್ತಾರೆ.ಅದರಲ್ಲೂ ಮಳೆಗಾಲದ ಸಂದರ್ಭ ಸಿಗುವ ಕಲ್ಲೇಡಿಗೆ ಭಾರೀ ಡಿಮ್ಯಾಂಡ್ ಇದ್ದು,ಕೊರೊನಾ ಮದ್ಯೆಯೂ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.

ಹೆಚ್.ಡಿ ಕೋಟೆ ಮತ್ತು ಭೀಮನಳ್ಳಿ ಭಾಗದಿಂದ ಚೀಲಗಟ್ಟಲೆ ತಂದು ಮಡಿಕೇರಿ ನಗರದ ಹಳೆ ಖಾಸಗಿ ಬಸ್ ನಿಲ್ದಾಣ,ಸಾರಿಗೆ ಬಸ್ ನಿಲ್ದಾಣ ರಸ್ತೆ,ಅಂಚೆ ಕಚೇರಿ ಎದುರು,ಟೋಲ್ಗೇಟ್ ನಲ್ಲಿ ಮಾರಾಟ ಮಾಡುತ್ತಿದ್ದಾರೆ ಕೆಜಿ ವೊಂದಕ್ಕೆ 300-350 ರುಪಾಯಿಗೆ ಮಾರಾಟವಾಗುತ್ತಿದ್ದರೂ ಮಾಂಸ ಪ್ರಿಯರು ಹಬ್ಬದ ಹೆಸರಿನಲ್ಲಿ ಖರೀದಿಸಿ ಖಾದ್ಯ ಮಾಡಲು ತೆಗೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿದೆ.

ಎಡಿಗಳನ್ನು ಆಹಾರದಲ್ಲಿ‌ಸೇವಿಸುವುದರಿಂದ ಹಲವಾರ ಆರೋಗ್ಯಕಾರಿ ಆಂಶಗಳು ನಮ್ಮದಾಗುತ್ತದೆ. ಅವುಗಳೆಂದರೆ:

ಇವುಗಳ ಮಾಂಸ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.

ಹೃದಯದ‌‌ ಆರೋಗ್ಯ ಹೆಚ್ಚಲೂ ಕೂಡ ಇದು ಕಾರಣವಾಗಬಲ್ಲದು.

ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕುತ್ತದೆ.

ಮಾನಸಿಕ ಚಟುವಟಿಕೆಗಳ‌ನ್ನು ಚುರುಕಾಗಿಸುತ್ತದೆ

ಶರೀರದ ಒಳಗೆ ರಕ್ತ ಸಂಚಾರವನ್ನು ಸಲೀಸಾಗಿಸುತ್ತದೆ.

error: Content is protected !!