ಎ.ಕೆ ಸುಬ್ಬಯ್ಯ ಮಹಿಳಾ ಸಾಧಕಿ ಪ್ರಶಸ್ತಿಗೆ ಎಂ.ಎ ರುಬೀನಾ ಆಯ್ಕೆ

ಮಡಿಕೇರಿ ಏ.30 : ಸೆಂಟರ್ ಫಾರ್ ಅಡ್ವಾನ್ಸ್ ರಿಸರ್ಚ್ ಇನ್ ಎಜುಕೇಶನ್ (ಕೇರ್) ನೀಡುವ ಎ.ಕೆ.ಸುಬ್ಬಯ್ಯ ಮಹಿಳಾ ಸಾಧಕಿ ಪ್ರಶಸ್ತಿ -2021 ಕ್ಕೆ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಎಂ.ಎ.ರುಬೀನಾ ಆಯ್ಕೆಯಾಗಿದ್ದಾರೆ.

ಮೇ 5 ರಂದು ಶಾಹೀನ್ ಸಮೂಹ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ತೌಸೀಫ್ ಅಹ್ಮದ್ ಪ್ರಶಸ್ತಿ ನೀಡಲಿದ್ದಾರೆ. ಎಂದು ಕೇರ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಬ್ದುಲ್ಲಾ ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆಯಲ್ಲಿ ಸೇವಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿರುವ ರುಬೀನಾ ಅವರು, ಲಾಕ್‌ಡೌನ್ ಸಂದರ್ಭ ವಿವಿಧ ಸಂಸ್ಥೆಗಳೊದಿಗೆ ಸೇರಿ ಸಾರ್ವಜನಿಕರಿಗೆ ನೆರವು ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯೆಯಾಗಿ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

error: Content is protected !!