fbpx

ಎಸ್.ಡಿ.ಆರ್.ಎಫ್ ಇಂದ ಅನುದಾನ ಬಿಡುಗಡೆ

ಕರ್ನಾಟಕ: ರಾಜ್ಯಾದ್ಯಂತ ಭಾರೀ ಮಳೆಯಾಗಿ ತೀವ್ರ ನಷ್ಟ ಸಂಭವಿಸುತ್ತಿರುವುದರಿಂದ ರಾಜ್ಯ‌ ಸರಕಾರ 10 ಜಿಲ್ಲೆಗಳಿಗೆ‌ ಹಣ‌ ಬಿಡುಗಡೆ ಮಾಡಿದೆ.

ಮೈಸೂರು, ಕೊಡಗು, ಚಾ.ನಗರ ಸೇರಿದಂತೆ 10 ಪ್ರವಾಹಪೀಡಿತ ಜಿಲ್ಲೆಗಳಿಗೆ ತಲಾ ಐದು ಕೋಟಿ ರೂ.ನಂತೆ ಒಟ್ಟು 50 ಕೋಟಿ ಪರಿಹಾರ ಬಿಡುಗಡೆ ಮಾಡಲಾಗಿದೆ.

ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (ಎಸ್‌ಡಿಆರ್‌ಎಫ್‌) ಅನುದಾನ ಬಿಡುಗಡೆ ಮಾಡಲಾಗಿದೆ.

ಈ ಸಾಲಿನಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಹಾವೇರಿ, ದಕ್ಷಿಣ ಕನ್ನಡ, ಧಾರವಾಡ ಜಿಲ್ಲೆಗಳು ಸೇರಿವೆ. ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಮತ್ತು ಮಳೆ ಹಾನಿಯನ್ನು ಸಮಗ್ರವಾಗಿ ನಿರ್ವಹಿಸಲು ಹಾಗೂ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಈ ಜಿಲ್ಲೆಗಳಿಗೆ ತಲಾ ಐದು ಕೋಟಿ ಪರಿಹಾರ ನೀಡಲಾಗಿದೆ.

error: Content is protected !!