ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ, ಶೇ 99.9 ವಿದ್ಯಾರ್ಥಿಗಳು ಪಾಸ್

ಪ್ರಸಕ್ಥ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು,ಒಬ್ಬ ವಿದ್ಯಾರ್ಥಿನಿ ಗೈರಾಗಿದ್ದು ಹೊರತು ಪಡಿಸಿ ಪರೀಕ್ಷೆಗೆ ಹಾಜರಾದ ಪ್ರತಿಯೊಬ್ಬರು ತೇರ್ಗಡೆ ಹೊಂದಿದ್ದಾರೆ. ತಾನು ಪರೀಕ್ಷೆ ಬರೆಯದೆ ಮತ್ತೊಬ್ಬರನ್ನು ಪರೀಕ್ಷೆಗೆ ಹಾಜರು ಪಡಿಸಿದ ಹಿನ್ನಲೆ ಶೇ 100 ರಷ್ಟು ಬರಬೇಕಾದ ಫಲಿತಾಂಶ 99.9ಕ್ಕೆ ಸೀಮಿತಗೊಂಡಿದೆ.
ಈ ವರ್ಷ A+ ಗ್ರೇಡ್ 1,28,931.ಎ ಗ್ರೇಡ್ 2,50,317,ಬಿ ಗ್ರೇಡ್ 2,87,684,ಸಿ ಗ್ರೇಡ್ 1,13,610 ವಿದ್ಯಾರ್ಥಿಗಳು ಪಡೆದುಕೊಂಡಿದ್ದು, ನಾಳೆ ದಿನ ಆಯಾ ಶಾಲೆಗಳಲ್ಲಿ ಪ್ರಕಟವಾಗಲಿದೆ.