ಎಲೆಕೊಸಿಗೆ ಸಿಗದ ಮಾರುಕಟ್ಟೆ: ಫಸಲು ನಾಶ ಮಾಡಿದ ರೈತ

ಕೊಡಗು: ಲಾಕ್ಡೌನ್ ನಿಂದ ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ಸಂಕಷ್ಟದಲ್ಲಿರುವ ರೈತರಿಗೆ ಮಾರುಕಟ್ಟೆಯಲ್ಲೂ ಸೂಕ್ತ ಬೆಲೆ ಸಿಗುತ್ತಿಲ್ಲ.ಹೀಗೆ 70 ಸಾವಿರ ಖರ್ಚು ಮಾಡಿ ಕೊಳವೆ ಬಾವಿ ತೋಡಿಸಿ ಉತ್ತಮ ಇಳುವರಿ ಪಡೆದುಕೊಂಡಿದ್ದ ಕೂಡಿಗೆ ಸಮೀಪದ ಸೀಗೆಹೊಸೂರಿನ ರೈತ ನಾಗೇಶ್ ತಾನು ಎರಡು ಏಕರೆಯಲ್ಲಿ ಬೆಳೆದ ಎಲೆಕೋಸನ್ನು ತನ್ನ ಟ್ರಾಕ್ಟರ್ ಮೂಲಕ ನಾಶಪಡಿಸಿ ತನ್ನ ಅಸಾಹಯಕತೆ ತೋರಿದ್ದಾನೆ.

ಇಳುವರಿಗೆ ಬರುತ್ತಿದ್ದ ಕೋಸಿಗೆ ಪ್ರತೀಕೂಲ ಮಳೆಯಿಂದ ಸ್ವಲ್ಪ ಪೆಟ್ಟಾದರೂ ಚೇತರಿಸಿಕೊಂಡ ರೈತ ಏಕಾಏಕಿ ಮಾರುಕಟ್ಟೆಯಿಲಾಲದೆ,ಕೊಳ್ಳುವವರು ಸಿಗದೆ,ಮಾರುಕಟ್ಟೆಗೂ ಸಾಗಿಸಲು ಸಾಧ್ಯವಾಗದೆ ನೊಂದು ಈ ನಿರ್ಧಾರ ಕೈಗೊಂಡಿದ್ದಾನೆ.
ರೈತರಲ್ಲಿ ಮನವಿ:ನೀವು ಬೆಳೆದ ಬೆಳೆಯನ್ನು ಹೀಗೆ ನಾಶ ಪಡಿಸುವ ಬದಲು,ಕೋವಿಡ್ ಕೇಂದ್ರ,ನಿರ್ಗತಿಕರು,ಗ್ರಾಮಸ್ಥರಲ್ಲೇ ಹಂಚಿದಲ್ಲಿ ಇಂತಹಾ ಸಂದರ್ಭದಲ್ಲಿ ಅವರಿಗಾದರೂ ಉಪಯೋಗವಾಗಬಹುದು.