ಎರಡು ದಿನ ಭಾರೀ ಮಳೆ ಆಗುವ ಸಾಧ್ಯತೆ

ಕೊಡಗು ಜಿಲ್ಲೆಯಾದ್ಯಂತ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ನೀಡಿರುವ ಹೇಳಿಕೆ ಬೆನ್ನಲ್ಲೇ ನಾಳೆವರೆಗೆ ಆರೆಂಜ್ ಅಲರ್ಟ್ ಜಿಲ್ಲೆಯಲ್ಲಿ ಘೋಷಣೆಯಾಗಿದೆ.

ಅತೀ ಮಳೆ ಬೀಳುವ ಕಾವೇರಿ ತವರು ತಲಕಾವೇರಿ ಮತ್ತು ಭಾಗಮಂಡಲ ಭಾಗದಲ್ಲಿ ಮಳೆ ಇಳಿಮುಖವಾಗಿದ್ದು ನಿಧಾನಗತಿಯಲ್ಲಿ ಕಾವೇರಿ ತನ್ನ ಕ್ಷೇತ್ರದ ಭಾಗದಲ್ಲಿ ಶಾಂತವಾಗಿದೆ. ಕಳೆದ 24 ಗಂಟೆಯಲ್ಲಿ ಭಾಗಮಂಡಲ ವ್ಯಾಪ್ತಿಯ ಪ್ರದೇಶದಲ್ಲಿ 66 ಮಿಲಿಮೀಟರ್ ಆಗಿದ್ದು, ಈವರೆಗೆ 960 ಮಿಲಿಮೀಟರ್ ದಾಖಲಾಗಿದೆ.

error: Content is protected !!