ಎರಡು ದಿನದೊಳಗೆ ಹುಲಿ ಹಿಡಿಯಲಾಗುವುದು:ಲಿಂಬಾವಳಿ ಭರವಸೆ

.
ಕೊಡಗು:ಮೂರು ಮಾನವ ಹತ್ಯೆ 15ಕ್ಕೂ ಹೆಚ್ಚು ಜಾನುವಾರುಗಳ ಬಲಿಗೆ ಕಾರಣವಾಗಿರುವ ಹುಲಿಯನ್ನು ಇನ್ನು ಎರಡು ದಿನಗಳ ಒಳಗಾಗಿ ಸೆರೆ ಹಿಡಿಯುವುದಾಗಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಭರವಸೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಕೊಡಗಿನ ರೈತರ ಆತಂಕ,ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು ,ಈಗಾಗಲೇ ಹುಲಿಯ ಚಲನವಲನ ಫೋಟೋಗಳು ಕಾರ್ಯಾಚರಣೆ ನಡೆಸುವ ತಜ್ಞರಿಗೆ ದೊರೆತಿದ್ದು,ಬಹುತೇಕ ಸೆರೆ ಹಿಡಿಯಲಾಗುವುದು ಅನಿವಾರ್ಯ ಬಿದ್ದಲ್ಲಿ ಶೂಟ್ ಮಾಡಲಾಗುವುದೆಂದು ಅವರು ತಿಳಿಸಿದರು.

error: Content is protected !!