ಎರಡು ದಿನಗಳ ಕಾಲ ನಡೆಯಲಿದೆ ರಾಮೋತ್ಸವ

ಮಡಿಕೇರಿಯಲ್ಲಿ ಏ.೨, ೧೦ ಹಾಗೂ ೧೧ ರಂದು ಶ್ರೀ ರಾಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು
ಮಡಿಕೇರಿ ಮಾ.೩೦ : ಶ್ರೀ ರಾಮೋತ್ಸವ ಸಮಿತಿ ವತಿಯಿಂದ ಏ.೨, ಏ.೧೦ ಹಾಗೂ ಏ.೧೧ ರಂದು ಶ್ರೀ ರಾಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ನಗರದ ವೇದಾಂತ ಸಂಘದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಏ.೨ ರಂದು ಬೆಳಿಗ್ಗೆ ೧೧.೧೫ ರಿಂದ ಕೊಡಗು ವೈದಿಕ ವೃಂದದಿಂದ ರುದ್ರಪಠಣ, ಪಂಚಾಂಗ ಶ್ರವಣ ಜರುಗಲಿದೆ. ಸಂಜೆ ೬.೧೫ ರಿಂದ ಮಡಿಕೇರಿಯ ಚಿತ್ರಾ ನಂಜಪ್ಪ ಮತ್ತು ಬಳಗದಿಂದ ಭಕ್ತಿ ವೈವಿದ್ಯ ಕಾರ್ಯಕ್ರಮ ನಡೆಯಲಿದೆ.

ಏ.೧೦ ರಂದು ಶ್ರೀ ರಾಮನವಮಿ ಅಂಗವಾಗಿ ಬೆಳಿಗ್ಗೆ ೧೧.೧೫ ರಿಂದ ಮಡಿಕೇರಿಯ ಶಿವಶಕ್ತಿ ಮಹಿಳಾ ವೃಂದದಿಂದ ಭಗವದ್ಗೀತಾ ಪಠಣ, ಸ್ರೋತ್ರ ಪಠಣ, ರಾಮರಕ್ಷಾ ಸ್ರೋತ್ರ ಪಠಣ ಜರುಗಲಿದೆ. ಸಂಜೆ ೬.೧೫ ರಿಂದ ಮಡಿಕೇರಿಯ ಶ್ರುತಿಲಯ ವೃಂದದಿಂದ ಭಕ್ತಿ ಗಾನ ಸುಧೆ ಕಾರ್ಯಕ್ರಮ ಜರುಗಲಿದೆ.

ಏ.೧೧ ರಂದು ಹನುಮಂತೋತ್ಸವ ಪ್ರಯುಕ್ತ ಬೆಳಿಗ್ಗೆ ೧೧.೧೫ ರಿಂದ ಮಡಿಕೇರಿಯ ಸ್ಫೂರ್ತಿ ಮಹಿಳಾ ವೃಂದದಿಂದ ಭಕ್ತಿ ಸಂಗೀತ, ಹನುಮಾನ್ ಚಾಲೀಸ್ ಪಠಣ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಜಿ.ಆರ್.ರವಿಶಂಕರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ೯೪೪೮೪೮೭೭೨೨, ೯೪೪೮೨೧೭೧೦೪, ೯೪೪೮೩೭೭೦೨೭ ಸಂಪರ್ಕಿಸಬಹುದಾಗಿದೆ.

error: Content is protected !!