ಎರಡು ತಿಂಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಆಗಿರುವ ನಷ್ಟ:ಜಿಲ್ಲಾಡಳಿತ ವರದಿ ಬಿಡುಗಡೆ

ಕೊಡಗು ಜಿಲ್ಲೆಯಲ್ಲಿ ಜೂನ್ ನಲ್ಲಿ ಆರಂಭಗೊಂಡ ಮಳೆಯಿಂದ ಜುಲೈ ಅಂತ್ಯದವರೆಗೆ ಆಗಿರುವ ನಷ್ಟದ ಬಗ್ಗೆ ಜಿಲ್ಲಾಡಳಿತ ವರದಿ ಬಿಡುಗಡೆ ಮಾಡಿದೆ.ಜಿಲ್ಲೆಯಲ್ಲಿ ಈವರೆಗೆ 1096.3 ಮಿಲಿಮೀಟರ್ ಮಳೆಯಾಗಿದ್ದು,24 ಜನವಸತಿ ಪ್ರದೇಶಗಳು ಹಾನಿಗೊಳಗಾಗಿದೆ.

ಮದೆನಾಡು ಬಳಿ ರಾಷ್ಟ್ರೀಯ ಹೆದ್ದಾರಿ,ಆಕಾಶವಾಣಿ ಕಚೇರಿ ಬಳಿಯ,ಜಿಲ್ಲಾಧಿಕಾರಿ ಕಛೇರಿ ಸಮುಚಾಯ ಬಳಿಯ , ಚೆಂಬು ಗ್ರಾಮದಲ್ಲಿ ಬರೆ, ಮಕ್ಕಂದೂರು ಬಾಲಾಜಿ ಎಸ್ಟೇಟ್, ತಾಳತ್ಮನೆ ಬಳಿಯ ರಾಷ್ಟ್ರೀಯ ಹೆದ್ದಾರಿ, ದೇವಸ್ತೂರು-ನಾಚುಮೊಳೆ ರಸ್ತೆ, ಹೊದಕಾನ, ಚೆಟ್ಟಳ್ಳಿ ಕತ್ತಲೆಕಾಡುವಿನ ರಸ್ತೆ, ಮಕ್ಕಂದೂರು ಹಟ್ಟಿ ಹೊಳೆ, ಹೆಬ್ಬೆಟಗೇರಿ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಮತ್ತು ಬರೆಕುಸಿತ ಸಂಭವಿಸಿದೆ.ಜಿಲ್ಲೆಯಲ್ಲಿ ಬಾಬಿ ಚಿಣ್ಣಪ್ಪನವರು ಒಬ್ಬರು ಮೃತಪಟ್ಟರೆ, ಜಿಲ್ಲಾಧಿಕಾರಿ ಕಚೇರಿ ಬಳಿ ಬರೆ ಕುಸಿತದಲ್ಲಿ ಒಬ್ಬರು ಪೌರಕಾರ್ಮಿಕರು ಮತ್ತು ಸೋಮವಾರಪೇಟೆಯ ನಾಕೂರಿನಲ್ಲಿ ಮನೆ ಮೇಲೆ ಮರ ಬಿದ್ದ ಪರಿಣಾಮ ಒಬ್ಬ ವ್ಯಕ್ತಿಗೆ ಗಾಯಗಳಾಗಿದೆ.

ಜಿಲ್ಲೆಯಾಧ್ಯಂತ 4 ಮನೆಗಳು ಸಂಪೂರ್ಣ ಹಾನಿಯಾಗಿದ್ದು 89 ಮನೆಗಳು ಭಾಗಶಃ ಹಾನಿಗೊಳಗಾಗಿದೆ. 11 ಪ್ರಾಣಿಗಳು ಮೃತಪಟ್ಟರೆ,24 ಮಂದಿಯನ್ನು ಸ್ಥಳಾಂತರ ಮಾಡಲಾಗಿದ್ದು 2 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದು ಹೊರತು ಪಡಿಸಿ 1488 ವಿದ್ಯುತ್ ಕಂಬಗಳು, 89 ಟ್ರಾನ್ಸ್ ಫಾರ್ಮರ್ ಮತ್ತು ನಾಲ್ಕು ಸೇತುವೆಗಳು ಹಾನಿಗೊಳಗಾಗಿದೆ.

error: Content is protected !!