ಮೂರು ಚಿರತೆಗಳ ಅನುಮಾನಾಸ್ಪದ ಸಾವು!

ಮೈಸೂರು: ಕೈಗಾರಿಕಾ ಪ್ರದೇಶದಲ್ಲಿ ನಾಲ್ಕು ಚಿರತೆಗಳು ಪ್ರತ್ಯಕ್ಷವಾಗಿ ಆತಂಕ ಉಂಟು ಮಾಡಿದೆ. ಇಲ್ಲಿನ ಬೆಮೆಲ್ ಕೈಗಾರಿಕೆ ಕಟ್ಟಡ ಸಮೀಪವೇ ಓಡಾಡಿಕೊಂಡಿದ್ದ ಚಿರತೆಗಳ ಪೈಕಿ ಮೂರು ತಡೆಗೋಡೆ ಜಿಗಿದು ಪಾರಾದರೆ, ಮತ್ತೆರೆಡು ಆವರಣದಲ್ಲೇ ತಿರುಗಾಡಿ ಮತ್ತೆ ಕಣ್ಮರೆಯಾಗಿದೆ.

ಸ್ಥಳೀಯರು ಮೊಬೈಲ್ ಕ್ಯಾಮರಾದಲ್ಲಿ ಚಿರತೆಗಳ ಓಡಾಟ ಸೆರೆ ಹಿಡಿದ ದೃಶ್ಯಾವಳಿ

ಇಂದು ಬೆಳಿಗ್ಗೆ ಇಲ್ಲಿಗೆ ಸಮೀಪದ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಎರಡು ಚಿರತೆಗಳು ಅನುಮಾನಸ್ಪದವಾಗಿ ಸಾವನಪ್ಪಿದ್ದು, ಸ್ಥಳಕ್ಕೆ ಪೋಲಿಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಚಿರತೆಗಳ ಓಡಾಟದ ಚಿತ್ರವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಚಿರತೆಗಳು ಸಮೀಪವೇ ಇರುವ ಬೆಳವಾಡಿ ಕೆರೆಯಲ್ಲಿ ನೀರು ಕುಡಿದಿರುವ ಸಾಧ್ಯತೆ ಇದ್ದು,ಅದು ವಿಷಯುಕ್ತವಾಗಿದ್ದು, ಮೃತ ಪಟ್ಟಿವೆ ಎಂಬ ಅನುಮಾನ ದಟ್ಟವಾಗಿದೆ.

error: Content is protected !!