fbpx

ಎರಡು ಆನೆ ದಂತ ವಶ, ಮೂವರ ಬಂಧನ

ಕುಶಾಲನಗರದ ಬೆಳ್ಳೂರು ಮಾದಾಪಟ್ಟಣ ಜಂಕ್ಷನ್ ಬಳಿ ಆನೆ ದಂತ ಮಾರಾಟ ಮಾಡುತ್ತಿದ್ದ ತಂಡವನ್ನು ಸೆರೆ ಹಿಡಿಯುವಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಸಿಐಡಿ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾರಂಗಿ ಜಲಾಶಯ ಕ್ಕೆ ತೆರಳುವ ಮಾರ್ಗದ ಗುಡ್ಢೆಹೊಸೂರುವಿನಲ್ಲಿ ಎರಡು ಆನೆ ದಂತಗಳನ್ನು ಹಿಡಿದು ವುಜೈಲ್ ಅಹಮದ್, ನಯಾಜುದ್ದೀನ್ ಖಾನ್ ಮತ್ತು ಅಶ್ರಫ್ ಎಂ.ಎ ಬಂಧಿತರಾಗಿದ್ದು, ಬಂಧಿತರಿಂದ ದಂತ ಮತ್ತು ಕೃತ್ಯದ ಸಾಗಾಟಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!