ಎಫಿಎಲ್ -ಬಿಪಿಲ್ ಪಡಿತರ ಹಂಚಿಕೆಯಲ್ಲಿ ಅಸಮಧಾನ, ಫಲಾನುಭವಿಗಳ ಆಕ್ರೋಶ

ಕೊಡಗು: ಕೊರೊನಾ ಎರಡನೇ ಹಿನ್ನಲೆ ಉಭಯ ಸರ್ಕಾರಗಳು ಉಚಿತ ಅಕ್ಕಿ ನೀಡುವ ಪ್ಯಾಕೇಜ್ ಜನ ಸಮಾನ್ಯರಿಗೆ ನೀಡುತ್ತಿದ್ದಂತೆ, ಬಿಪಿಎಲ್ ಫಲಾನುಭವಿಗಳಿಗೆ ಉಚಿತ ಅಕ್ಕಿ ನೀಡುವುದಕ್ಕೆ ಆದೇಶ ನೀಡಲಾಗಿದೆ ಅದರಂತೆ ಕೊಡಗಿನಲ್ಲಿ ಮೇ 10 ತಾರೀಖಿನಿಂದ ನೀಡಲಾಗುತ್ತಿದ್ದು ಫಲನಾನುಭವಿಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ಈ ನಡುವೆ ಕುಶಾಲನಗರದಲ್ಲಿ ಪಡಿತರ ಹಂಚಿಕೆಗೆಂದು ರೈತಭವನದಲ್ಲಿ ಬಿಪಿಎಲ್ ಫಲಾನುಭವಿಗಳು ಜಿಟಿಜಿಟಿ ಮಳೆಯ ನಡುವೆ ನಿಂತರೂ ಅಕ್ಕಿ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದರೆ,ಇನ್ನೊಂದೆಡೆ ಬೈಯೋ ಮೆಟ್ರಿಕ್ ಬದಲು
ಒಟಿಪಿ ಮೂಲಕ ಮತ್ತೊಂದು ಗೊಂದಲ, ಇಷ್ಟು ಮಂದಿ ಫಲಾನುಭವಿಗಳಿಗೆ ಇರುವುದೊಂದು ಕಂಪ್ಯೂಟರ್ ಆಪರೇಟರ್ ಇವೆಲ್ಲದರ ನಡುವೆ ಕೆಜಿ ಗೆ 15 ರುಪಾಯಿಯಂತೆ ಎಪಿಎಲ್ ಪಡಿತರ ಫಲಾನುಭವಿಗಳಿಗೆ ಸುಗಮವಾಗಿ ಹಣ ಪಡೆದು ಅಕ್ಕಿ ವಿತರಣೆಯಾಗುತ್ತಿರುವುದು ಜಟಾಪಟಿಗೆ ಕಾರಣವಾಗಿದ್ದು, ಕೆಲ ಗಂಟೆಗಳ ಕಾಲ ಗೊಂದಲಗೂಡಾಗಿ ಪಡಿತರ ವಿತರಣೆ ಇನ್ನಷ್ಟು ವಿಳಂಬವಾಯಿತು.