ಎಟಿಎಂ ದುರುಪಯೋಗ: 15 ಸಾವಿರ ಲಪಟಾಯಿಸಿದ ಕಿರಾತಕರು!

ಹಣ ತೆಗೆಯುವ ಬರದಲ್ಲಿ ವ್ಯಕ್ತಿಯೊಬ್ಬರು, ಹಣ ಪಡೆದು ಕಾರ್ಡ್ ಎಟಿಂ ಕೇಂದ್ರದಲ್ಲಿ ಬಿಟ್ಟುಕೊಡುವುದು ಮತ್ತೊಬ್ಬ ಗ್ರಾಹಕ ದುರುಪಯೋಗ ಪಡೆಸಿಕೊಂಡಿದ್ದು ಕುಶಾಲನಗರ ತಾಲ್ಲೂಕಿನ ಏಳನೇ ಹೊಸಕೋಟೆಯಲ್ಲಿ ಬೆಳಕಿಗೆ ಬಂದಿದೆ.
ಸೋಮವಾರಪೇಟೆಯ ಮಾದಾಪುರ ಜಂಬೂರು ಟಾಟಾ ಕಾಫಿ ಎಷ್ಟೇಟ್ ಸಿಬ್ಬಂದಿ ಸುರೇಶ್ ವವರೇ ಎಟಿಎಂ ಕಾರ್ಡ್ ಮತ್ತು ಹಣ ಕಳೆದುಕೊಂಡವರಾಗಿದ್ದಾರೆ.
ಘಟನೆ ವಿವರ:
ಕುಶಾಲನಗರಕ್ಕೆ ಕೆಲಸದ ನಿಮಿತ್ತ ಸುರೇಶ್ ತೆರಳುವ ಸಂದರ್ಭ ಏಳನೇ ಹೊಸಕೋಟೆ ಯುನಿಯನ್ ಬ್ಯಾಂಕಿನ ಏಟಿನ ನಿಂದ 10 ಸಾವಿರ ಹಣ ಪಡೆದು ತರಾತುರಿಯಲ್ಲಿ ಕಾರ್ಡ್ ಅನ್ನು ಎಟಿಎಂ ಸೆಂಟರ್ ನಲ್ಲಿ ಬಿಟ್ಟು ತೆರಳಿದ್ದಾರೆ, ಇದಾದ ಸ್ವಲ್ಪ ಹೊತ್ತಿನ ನಂತರ ಬಂದ ಗ್ರಾಹಕ ಕಾರ್ಡ್ ಅನ್ನು ಗಮನಿಸಿದ್ದರು,ಅದರ ಮೇಲಿನ ಕವರಿನಲ್ಲಿದ್ದ ಸಂಖ್ಯೆಯನ್ನು ಒತ್ತಿ ಪರೀಕ್ಷಿಸಿದ,ಚಾಲನೆಗೊಂಡ ಹಿನ್ನೆಲೆ 15 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾನೆ,
ಸುರೇಶ್ ಅಕೌಂಟ್ ನಲ್ಲಿ ಇನ್ನಷ್ಟು ಹಣ ಇದ್ದು,ದಿನದ ಮಿತಿ ಕೇವಲ 25 ಇದ್ದ ಕಾರಣ,ಅಂದು ಕಿರಾತಕನಿಗೆ ಅಷ್ಟೇ ಹಣ ಪಡೆಯಲು ಸಾಧ್ಯವಾಗಿದೆ.
ಕಾರ್ಡ್ ಕಳೆದುಕೊಂಡ ಸುರೇಶ್ ಆನ್ ಲೈನ್ ಮೂಲಕ ಅಕೌಂಟ್ ಪರಿಶೀಲಿಸಿದ್ದು ಹಣ ಡ್ರಾ ಮಾಡಿರುವುದು ಕಂಡು ಬಂದಿದ್ದು, ಬ್ಯಾಂಕಿಗೆ ತೆರಳಿ ಎಟಿಎಂ ಬ್ಲಾಕ್ ಮಾಡಿಸಿದ್ದಾರೆ. ಇಷ್ಟೆಲ್ಲಾ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕಿರಾತಾರ್ಜುನೀಯ ಪತ್ತೆಗೆ ಮನವಿ ಮಾಡಿದ್ದಾರೆ.