fbpx

ಎಟಿಎಂ ದರೋಡೆ ಯತ್ನ,ಸೆಕ್ಯುರಿಟಿ ಹತ್ಯೆ

ಸಿಂದಗಿ: ಪಟ್ಟಣದ ಐಸಿಐಸಿಐ ಬ್ಯಾಂಕ್ ಎಟಿಎಮ್ ಸೆಕ್ಯೂರಿಟಿ ಗಾರ್ಡ ರಾಹುಲ ಖೀರು ರಾಠೋಡ (೨೫) ಹತ್ಯೆಮಾಡಲಾಗಿದೆ. ರಾತ್ರಿ ಸುಮಾರು 2 ಗಂಟೆಗೆ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಎಟಿಎಮ್ ನಲ್ಲಿದ್ದ ಹಣ ದೊಚಿ ಪರಾರಿಯಾಗಲು ಖದೀಮರು ಯತ್ನಿಸಿದ್ದಾರೆ. ಆದರೆ ಎಟಿಎಮ್ ಸೈರನ್ ಶಬ್ದಕ್ಕೆ ಓಡಿ ಹೋಗಿದ್ದಾರೆ. ಮೊದಲು ಸೆಕ್ಯೂರಿಟಿ ಗಾರ್ಡನ್ ತಲೆಗೆ ಬಲವಾಗಿ ಕಬ್ಬಿಣದ ರಾಡನಿಂದ್ ಹೊಡದಿದ್ದಾರೆ. ಹತ್ಯೆಯಾದ ಯುವಕ ರಾಹುಲ್ ಖಿರು ರಾಠೋಡ (25) ವಿಜಯಪುರ ಜಿಲ್ಲೆಯ ಮದಭಾವಿ ತಾಂಡಾದ ನಿವಾಸಿ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಸಿಪಿಐ ಎಚ್ ಎಂ ಪಟೇಲ್, ಪಿಎಸಐ ಸಂಗಮೇಶ ಹೊಸಮನಿ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆ ಮಾಡುತ್ತಿದ್ದಾರೆ. ಪೊಲೀಸ್ ಸ್ಕಾಡ್ ಮೂಲಕ ಪರಿಶೀಲನೆ ಮಾಡಲಾಗುತ್ತಿದೆ. ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

error: Content is protected !!