ಎಂದೆಂದಿಗೂ ಭಾರತದ ಮಹಿಳಾ ಹಾಕಿ ತಂಡ ವಿಶ್ವದ ಸಿಂಹಿಣಿಯರು: ಕೋಚ್ ಅಂಕಿತಾ ಹೇಳಿಕೆ

ನಮ್ಮ ತಂಡವನ್ನು ವಿಶ್ವದ ಸಿಂಹಿಣಿ ಆಟಗಾರರೆಂದು ಗುರುತಿಸಲಾಗಿದೆ ವಿಶ್ವದಲ್ಲಿ 8 ನೇ ರಾಂಕ್ ಆದರೂ,ಒಲಂಪಿಕ್ಸ್ ನಲ್ಲಿ ನಾಲ್ಕನೇ ಪಟ್ಟಕ್ಕೆ ಏರಿದ್ದೇವೆ ಎಂದು ಕೊಡಗಿನ ಸುಂಠಿಕೊಪ್ಪದ ದೇಶದ ಮಹಿಳಾ ಹಾಕಿ ತಂಡದ ಕೋಚ್ ಅಂಕಿತಾ ಸುರೇಶ್ ತಿಳಿಸಿದ್ದಾರೆ.

ಕೊಡಗಿನ ಹೆಬ್ಬಾಗಿಲು ಕುಶಾಲನಗರದಲ್ಲಿ ಸ್ವಾಗತ ಮಾಡಿದ ವಿವಿಧ ಸಂಘಟನೆಗಳು ,ಕ್ರೀಡಾ ಕಾಶಿ ಕೊಡಗಿನ ಮಗಳಾಗಿ ನನಗೆ ಹೆಮ್ಮೆಯಿದೆ ನಮ್ಮ ತಂಡ ರಕ್ತ,ಬೆವರು ಸುರಿಸಿ ಕುಟುಂಬವನ್ನೇ ಪಣಕ್ಕಿಟ್ಟು ಹೋರಾಡಿದ್ದೇವೆ
ಕ್ರೀಡಾಪಟುಗಳಿಗೆ ನೀಡುವ ಬಲೆಗೆ ಕೋಚ್ ಗಳಿಗೆ ಸಿಗುತ್ತಿಲ್ಲ ಎನ್ನುವ ಬೇಸರವಿದೆ.ಮಹಿಳಾ ಹಾಕಿ ಕೋಚ್ ಮತ್ತು ಬಾಕ್ಸಿಂಗ್ ನಲ್ಲಿ ಕೊಡಗಿನ ಇಬ್ಬರು ಕೋಚ್ ಗಳಿದ್ದರು ಅವರಿಗೂ ಬೆಲೆ ಸಿಗಬೇಕು ಎಂದರು,ಮುಂದಿನ ಕ್ರೀಡಾಕೂಟಕ್ಕೆ ರೂಪು ರೇಷೆಗಳನ್ನು ಮಾಡಲಾಗುತ್ತಿದೆ.