ಊದು ಕೊಳವೆಯಿಂದ ಹತ್ಯೆ

ಕೊಡಗು:ಕುಡಿದ ಮತ್ತಿನಲ್ಲಿ ಬಂದು ತಾಯಿಯೊಂದಿಗೆ ಜಗಳವಾಡುತ್ತಿದ್ದ ತಂದೆಯನ್ನು ಕಬ್ಬಿಣದ ಊದುಕೊಳವೆ(ಕೊಳ್ಪೆ) ಯಲ್ಲಿ ಮಗನೇ ತಂದೆಗೆ ಹೊಡೆದು ಹತ್ಯೆ ಮಾಡಿರುವ ಘಟನೆ ಕಾರುಗುಂದದ ಕಡಿಯತ್ತೂರಿನಲ್ಲಿ ನಡೆದಿದೆ.
ವಸಿಷ್ಠ (57) ಮೃತ ವ್ಯಕ್ತಿ.
ಪ್ರತಿನಿತ್ಯ ವಸಿಷ್ಠ ಕುಡಿದು ಬಂದು ಮಗ ಚೇತನ್ ಮತ್ತು ಪತ್ನಿಯೊಂದಿಗೆ ಕ್ಷುಲ್ಲಕ ಕಾರಣತೆಗೆದು ಜಗಳವಾಡುತ್ತಿದ್ದ ಎನ್ನಲಾಗಿದೆ,ಈ ಜಗಳ ವಿಕೋಪಕ್ಕೆ ತಿರುಗಿದ ಸಂದರ್ಭ ಮನೆಯಲ್ಲಿದ್ದ ಕಬ್ಬಿಣದ ಊದುಕೊಳವೆಯಲ್ಲಿ ಚೇತನ್ ಬುದ್ದಿಕಲಿಸಲು ತಂದೆ ವಸಿಷ್ಠನ ತಲೆ ಸೇರಿದಂತೆ ಮೈ ಮೇಲೆ ಬಲವಾಗಿ ಹೊಡೆದಿದ್ದು ಬಳಿಕ ನೋವಿನಿಂದ ಬಳಲುತ್ತಿದ್ದ ತಂದೆಯ ಆರೈಕೆ ಮಾಡಿದ್ದಾನೆ ಆದರೆ ಬಲವಾದ ಏಟು ಬಿದ್ದ ಪರಿಣಾಮ ವಸಿಷ್ಠ ಸಾವನಪ್ಪಿದ್ದು ಕೊಲೆ ಪ್ರಕರಣ ದಾಖಲಿಸಿಕೊಂಡ ನಾಪೋಕ್ಲು ಪೋಲಿಸರು ಚೇತನ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.