ಊಟವಾದ ನಂತರ ಏಲಕ್ಕಿ ತಿನ್ನೋದ್ರಿಂದ ಹಲವು ಉಪಯೋಗಗಳು!

ನಮ್ಮ ಹಿರಿಯರು ಪ್ರತಿದಿನವೂ ಏಲಕ್ಕಿಯ ಉಪಯೋಗವನ್ನು ಮನೆಗಳಲ್ಲಿ ಕಡ್ಡಾಯಗೊಳಿಸಿದ್ದಿದ್ದು ಅವರ ಆರೋಗ್ಯ ಕಾಳಜಿಯನ್ನು ತೋರಿಸುವುದು ಸುಳ್ಳಲ್ಲ. ಇಂದಿಗೂ ಊಟವಾದ ತಕ್ಷಣ ವೀಳ್ಯದೆಲೆಯ ಬದಲಾಗಿ ಕೆಲವರು ನಾಲ್ಕು ಏಲಕ್ಕಿ ಕಾಳನ್ನು ಅಗಿದು ತಿನ್ನುವ ರೂಢಿ ಇಟ್ಟುಕೊಂಡಿರುವುದನ್ನು ನೋಡಿರಬಹುದು. ಅದಕ್ಕೆ ಮುಖ್ಯ ಕಾರಣ ಏಲಕ್ಕಿಯಲ್ಲಿರುವ ಕ್ಯಾನ್ಸರ್ ನಿರೋಧಕ ಶಕ್ತಿ.

ಜೀರ್ಣಕ್ರಿಯೆಯನ್ನು ಸರಾಗಗೊಳಿಸುವುದಷ್ಟೇ ಅಲ್ಲದೇ, ಏಲಕ್ಕಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ.

ಇದನ್ನು ಕಾಫಿ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯಲಾಗುತ್ತದೆ.ಏಲಕ್ಕಿಯನ್ನು ಔಷಧವಾಗಿ ಉಪಯೋಗಿಸುತ್ತಾರೆ. ಹಾಗೂ ಸಾಂಬಾರ ಪದಾರ್ಥವಾಗಿಯೂ ಉಪಯೋಗಿಸುತ್ತಾರೆ. ಫ್ಲೂವಿನಂತಹ ಜ್ವರಕ್ಕೆ ಇದನ್ನು ಔಷಧವಾಗಿ ಬಳಸುತ್ತಾರೆ.

ದನಗಳಲ್ಲಿ ಹೊಟ್ಟೆ ಉಬ್ಬರ ಸಮಸ್ಯೆಯು ಕಂಡುಬಂದಾಗಲು ಇದರ ಬಳಕೆಯನ್ನುಮಾಡಬಹುದಾಗಿದೆ. ಮಕ್ಕಳ ಬಿಕ್ಕಳುವಿಕೆಗೆ ಇದನ್ನು ಸಕ್ಕರೆಯೊಂದಿಗೆ ಉಪಯೋಗಿಸಬಹುದು. ಅಜೀರ್ಣ ಮತ್ತು ವಾಕರಿಕೆಗೂ ಔಷಧವಾಗಿ ಬಳಸುತ್ತಾರೆ. ಅನಾರೋಗ್ಯದ ಸಂದರ್ಭದಲ್ಲಿನ ಬಾಯಿಯ ವಾಸನೆಗೆ ಏಲಕ್ಕಿಯನ್ನು ಬಾಯಿಯಲ್ಲಿ ಇಟ್ಟುಕೊಳ್ಳಬಹುದು. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಏಲಕ್ಕಿಯನ್ನು ಬಳಸುತ್ತಾರೆ.

ಏಲಕ್ಕಿಯ ಉಪಯೋಗಗಳು :
# ನೆಗಡಿ ಮತ್ತು ಕೆಮ್ಮನ್ನು ನಿವಾರಿಸುವ ಶಕ್ತಿ ಇದಕ್ಕಿದೆ.
# ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಏಲಕ್ಕಿ ಸಹಕಾರಿ
# ಸಂಶೋಧನೆಗಳ ಪ್ರಕಾರ ಕ್ಯಾನ್ಸರ್ ಗುಣಪಡಿಸುವ ಶಕ್ತಿ ಏಲಕ್ಕಿಗಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಳೂ ನಡೆಯುತ್ತಿವೆ.
# ಅತೀ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಏಲಕ್ಕಿ ಸಹಕಾರಿ
# ಶ್ವಾಸಕೋಶದಲ್ಲಿ ನೋವುಂಟಾದರೆ ಏಲಕ್ಕಿ ಸೇವನೆಯಿಂದ ನಿವಾರಣೆಯಾಗುತ್ತದೆ.
# ಆಯಸಿಡಿಟಿಯಿಂದ ತೇಗು ಬರುತ್ತಿದ್ದರೆ ಏಲಕ್ಕಿ ಸೇವನೆಯಿಂದ ಕಡಿಮೆಯಾಗುತ್ತದೆ.
# ರಕ್ತ ಹೆಪ್ಪುಗಟ್ಟುವ ಅಪಾಯವನ್ನು ಇದು ತಡೆಗಟ್ಟುತ್ತದೆ. ರಕ್ತ ಸಂಚಾರ ಸರಾಗವಾಗಲು ಸಹಾಯಮಾಡುತ್ತದೆ.
# ಹೃದಯದ ಆರೋಗ್ಯವನ್ನೂ ಸಮಸ್ಥಿತಿಯಲ್ಲಿಡಲು ಇದು ಸಹಕಾರಿ.
# ಅಸ್ತಮಾ ಸಮಸ್ಯೆಯಿಂದ ಬಳಲುವವರು ಹೆಚ್ಚು ಏಲಕ್ಕಿ ಉಪಯೋಗಿಸುವುದು ಒಳ್ಳೆಯದು.
# ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ.
# ಉಸಿರಾಟದಲ್ಲಿ ತಾಜಾತನ ಇರಬೇಕೆಂದರೆ ಏಲಕ್ಕಿಯನ್ನು ಅಗಿಯಬಹುದು. ಇದು ಶ್ವಾಸಕೋಶ ಸಂಬಂಧೀ ಕಾಯಿಲೆಗಳನ್ನೂ ನಿವಾರಿಸುವ ಶಕ್ತಿಯನ್ನು ಹೊಂದಿದೆ. ಮೂತ್ರಸಂಬಂಧಿಕಾಯಿಲೆಗಳನ್ನೂ ಇದು ನಿವಾರಿಸುವ ಶಕ್ತಿಯನ್ನು ಹೊಂದಿದೆ.
# ಏಲಕ್ಕಿ ಚಹ ಸೇವಿಸುವುದರಿಂದ ಖಿನ್ನತೆ ಮಾಯವಾಗುತ್ತದೆಯಂತೆ! ಇದು ವೈಜ್ಞಾನಿಕವಾಗಿ ಸಾಬೀತಾಗದಿದ್ದರೂ ಆಯುರ್ವೇದವಂತೂ ಇದನ್ನು ಒಪ್ಪಿಕೊಂಡಿದೆ.

error: Content is protected !!