fbpx

ಉಸ್ತುವಾರಿ ಸಚಿವರ‌ ಭೇಟಿ

ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಶಾಲನಗರದ ಕುವೆಂಪು ಮತ್ತು ಸಾಯಿ ಬಡಾವಣೆಗಳಿಗೆ ಭೇಟಿ ನೀಡಿ ಜಲಾವೖತಗೊಂಡ ಮನೆಗಳ ಮಾಲೀಕರೊಂದಿಗೆ ಸಚಿವರು ಸಮಾಲೋಚನೆ ನಡೆಸಿದರು.

ಕಾವೇರಿ ನದಿ ತೀರದಲ್ಲಿ ಅನೇಕರು ಅಪಾಯದ ಅರಿವಿಲ್ಲದೇ ಮನೆಗಳನ್ನು ನಿಮಿ೯ಸಿಕೊಂಡಿದ್ದು ಈಗ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಸಮಸ್ಯೆ ಮರುಕಳಿಸದಂತೆ ಸಕಾ೯ರದಿಂದ ಶಾಶ್ವತ ಯೋಜನೆ ರೂಪಿಸಲಾಗುತ್ತದೆ ಎಂದೂ ಸಚಿವರು ಭರವಸೆ ನೀಡಿದರು. ಶಾಸಕ ರಂಜನ್ ಪ್ರಯತ್ನದಿಂದ ಈ ಬಾರಿ ಕಾವೇರಿ ನದಿ ಹೂಳೆತ್ತುವ ಕಾಯ೯ಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾಮಗಾರಿಗೆ ಚುರುಕು ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.

ಕೊಡಗಿನಲ್ಲಿ ಪ್ರಕೖತ್ತಿ ವಿಕೋಪ ಹಾನಿ ಸಂಬಂಧಿತ ಪರಿಹಾರ ಕಾಯ೯ಗಳಿಗೆ ಕೇಂದ್ರ ಮತ್ತು ರಾಜ್ಯ ಸಕಾ೯ರಗಳಿಂದ ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದ ಸೋಮಣ್ಣ, ಕೊಡಗಿನಾದ್ಯಂತ ಮಹಾಮಳೆಯಿಂದಾಗಿ ಸಾಕಷ್ಟು ಸಮಸ್ಯೆ ಉಂಟಾಗಿದೆ.
…..

error: Content is protected !!