ಉಸ್ತುವಾರಿ ಸಚಿವರಿಂದ ಭೇಟಿ, ಪರಿಶೀಲನೆ ಹಾಗು ಚೆಕ್ ವಿತರಣೆ

ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೆ ಒಳಗಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಸಚಿವ ಬಿ.ಸಿ ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೋಮವಾರಪೇಟೆ ತಾಲ್ಲೂಕಿನ ಬೆಸೂರು,ನರಗುಂದ ಹಾಗು ಕೆಲಕೊಡಿ ಗ್ರಾಮದಲ್ಲಿ ನಿರಂತರ ಮಳೆಯಿಂದ ಹಾನಿಗೆ ಒಳಗಾದ ಮನೆಗಳನ್ನು ವೀಕ್ಷಿಸಿದರು. ಹಾನಿಗೆ ಒಳಗಾದ ಮನೆಗಳಿಗೆ ಸ್ಥಳದಲ್ಲೇ ಪರಿಹಾರದ ಚೆಕ್ ವಿತರಿಸಲಾಯಿತು.

ಕುಶಾಲನಗರ ಪಟ್ಟಣದಲ್ಲಿ ಕಾವೇರಿ ನದಿಯಿಂದ ಪ್ರವಾಹ ಪೀಡಿತದಲ್ಲಿ ಮುಳುಗಡೆಯಾದ ಸಾಯಿ ಬಡಾವಣೆ, ಕಾವೇರಿ ಲೇ ಔಟ್ ಸೇರಿದಂತೆ ಕಾವೇರಿ ನದಿಯ ವೀಕ್ಷಣೆ ಮಾಡಿದ ಸಚಿವರು, ಕಾವೇರಿ ನದಿಯಿಂದ ಮತ್ತು ಹಾರಂಗಿ ಜಲಾಶಯದಿಂದ ಕೊಳೆತ್ತವ ಯೋಜನೆಯನ್ನು ಸಧ್ಯದಲ್ಲೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಮತ್ತು ಕಾವೇರಿ ನದಿಯಿಂದ ಮರಳು ತೆಗೆಯುವ ಯೋಜನೆಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.
ಸಚಿವರ ಜೊತೆ ಶಾಸಕ ಎಂ.ಪಿ ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.