fbpx

‘ಉಪ್ಪಿ’ಗಿಂತ ರುಚಿ ಬೇರೆ ಇಲ್ಲ, ಒಪ್ಪಿಕೊಂಡೋರು ದಡ್ಡರಲ್ಲ!

Different mannerism, filter less ಸಂಭಾಷಣೆ, ಡಬಲ್‌ Meaning ಪದಗಳಿಂದ ಪ್ರೇಕ್ಷಕರ ಮನ ಗೆದ್ದ ‘Real Star’ಗೆ ಇಂದು ಜನುಮ ದಿನದ ಸಂಭ್ರಮ…

ಅವರು ಕನ್ನಡ ಚಿತ್ರರಂಗಕ್ಕೆ ಹೊಸ ಟ್ರೆಂಡ್ ಸೆಟ್ ಮಾಡಿದ ಟ್ರೆಂಡ್ ಸೆಟ್ಟರ್ ನಟ. ಹೊಸ ಬಗೆಯ ಸಿನಿಮಾಗಳನ್ನು ಜನರು ಒಪ್ಪುವ ಮಟ್ಟಿಗೆ ಮಾಡಿದ ಪ್ರಯೋಗಶೀಲ ನಿರ್ದೇಶಕ. ತೀರಾ ಮಡಿವಂತಿಕೆಯ ಸಿನಿಮಾಗಳೇ ಬರುತ್ತಿದ್ದ ಕಾಲಕ್ಕೆ ಕಾಶಿನಾಥರ ಶಿಷ್ಯರಾಗಿ ಬಂದು Filter less ಸಂಭಾಷಣೆಗಳನ್ನು ಸಿನಿಮಾದಲ್ಲಿ ಪಟಪಟನೆ ಹೇಳಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡವರು ರಿಯಲ್ ಸ್ಟಾರ್.

ಬಡ ಅರ್ಚಕರ ಕುಟುಂಬದಲ್ಲಿ ಹುಟ್ಟಿ, ಬೆಳೆದು ಪದವಿ ಮುಗಿದ‌ ನಂತರ ನಟ ಹಾಗು ನಿರ್ದೇಶಕರಾಗಿದ್ದ ಕಾಶಿನಾಥ್ ಅವರ ಗರಡಿಯಲ್ಲಿ ಪಳಗಿದರು. ಕಾಶಿನಾಥ್ ಅವರೊಂದಿಗೆ ಗೀತ ಸಾಹಿತ್ಯ, ಸಂಭಾಷಣೆ, ಚಿತ್ರಕಥೆಯ ವಿಚಾರದಲ್ಲಿ ಎಲ್ಲಾ ಕ್ರೀಯಾಶೀಲವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಭೇಶ್ ಎನಿಸಿಕೊಂಡರು. 1992ರಲ್ಲಿ ಕಾಶಿನಾಥ್ ಅವರ ಡಬಲ್‌ ಮೀನಿಂಗ್ ಸಂಭಾಷಣೆ ಶೈಲಿಯಲ್ಲೇ ‘ತರ್ಲೆ ನನ್ ಮಗ’ ಸಿನಿಮಾ ನಿರ್ದೇಶಿಸಿದರು. ಜಗ್ಗೇಶ್ ಅವರ ನಟನೆಯ ಚೊಚ್ಚಲ ಸಿನಿಮಾ ಇದಾಗಿತ್ತು.

1993ರಲ್ಲಿ ಕುಮಾರ್ ಗೋವಿಂದ್ ಅಭಿನಯದ ‘ಶ್…!’ ಸಿನಿಮಾ ನಂತರ ತೆರೆ‌ ಕಂಡ ಹ್ಯಾಟ್ರಿಕ್ ಹೀರೋ ಡಾ.ಶಿವ ರಾಜ್ ಕುಮಾರ್ ನಾಯಕನಾಗಿ ನಟಿಸಿದ ‘ಓಂ’ ಚಲನಚಿತ್ರವೆಲ್ಲಾ ಅಂದಿಗೆ‌ ಬಾಕ್ಸ್ ಆಫೀಸ್ ಅಲ್ಲಿ ದಾಖಲೆ ಕಲೆಕ್ಷನ್ ಮಾಡಿ, ಇಂದಿಗೂ ಜನ ಮಾನಸದಲ್ಲಿ ಉಳಿದುಕೊಂಡಿದೆ.

1998 ರಿಂದ 2005ರ ಅವಧಿಯಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದ ನಟ ಉಪೇಂದ್ರರವರ A, ಉಪೇಂದ್ರ, ಪ್ರೀತ್ಸೆ, ಕುಟುಂಬ, ರಕ್ತ ಕಣ್ಣೀರು, ಗೋಕರ್ಣ, ಗೌರಮ್ಮ, ಆಟೋ ಶಂಕರ್ ಒಟ್ಟು ಎಂಟು ಸಿನಿಮಾಗಳು ಶತ ದಿನಗಳನ್ನು ಆಚರಿಸಿದವು.

ಈಗ ಚಂದ್ರು ಅವರ‌ ನಿರ್ದೇಶನದ ಕಬ್ಜಾ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಇದು ಪಂಚ ಭಾಷೆಗಳಲ್ಲಿ ತೆರೆ ಕಾಣಲಿದೆ‌. ಮುಂದಿನ ದಿನಗಳಲ್ಲಿ ಉಪೇಂದ್ರ ಮತ್ತೆ ಬಾ, ಇಂತಿ ನಿನ್ನ ಪ್ರೇಮ, ಕಣ್ಣೇಶ್ವರ, ಉಪ್ಪಿ ರುಪೀ ಸಿನಿಮಾಗಳು ತಯಾರಾಗಲಿವೆ.

ರಾಜಕೀಯದಲ್ಲಿಯೂ ಆಸಕ್ತಿ ಹೊಂದಿರುವ ಉಪೇಂದ್ರ ಅವರು 2018ರಲ್ಲಿ ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪಿಸಿದರು. ಚುನಾವಣೆಗಳಲ್ಲೂ ಇವರ ಪಕ್ಷವು ಸ್ಪರ್ಧಿಸುತ್ತಿದೆ. ಹೊಸ ಬಗೆಯ ವಿಭಿನ್ನ ದೃಷ್ಟಿಕೋನವನ್ನು ಸಿನಿಮಾ ರಂಗದಲ್ಲಿ, ಸಿನಿಮಾದಲ್ಲಿ ಮಾತ್ರವಲ್ಲ ರಾಜಕೀಯದಲ್ಲೂ ಹೊಂದಿದ್ದಾರೆ‌. ಅವರಿಗೆ ಇಂದು ಜನ್ಮದಿನದ ಸಂಭ್ರಮ. ಇನ್ನು ಮುಂದೆಯೂ ಮತ್ತಷ್ಟು ಸದಭಿರುಚಿಯ ಸಿನಿಮಾಗಳು ಮಾಡುವಂತಾಗಲಿ ಎಂಬುದೇ ಅವರ‌ ಅಭಿಮಾನಿಗಳ ಅಭಿಲಾಷೆ…

error: Content is protected !!