ಉದ್ಯೋಗ ಖಾತ್ರಿ ಯೋಜನೆ:ಮೇ 25ರವರೆಗೆ ಕಾಮಗಾರಿ ಸ್ಥಗಿತ


ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ 2021-22ನೇ ಆರ್ಥಿಕ ಸಾಲಿನಲ್ಲಿ ಒಟ್ಟು 71,065 ಉದ್ಯೋಗ ಚೀಟಿಯನ್ನು ನೀಡಲಾಗಿರುತ್ತದೆ. ಒಟ್ಟು 59,223 ಮಾನವ ದಿನಗಳು ಸೃಜನೆ ಆಗಿರುತ್ತದೆ. ಅದರಲ್ಲಿ ಒಟ್ಟು 3070 ಕುಟುಂಬಗಳ 5099 ವ್ಯಕ್ತಿಗಳಿಗೆ ಉದ್ಯೋಗವನ್ನು ಒದಗಿಸಲಾಗಿರುತ್ತದೆ.
ಆರ್ಥಿಕ ಸಾಲಿನ ಆರಂಭದಲ್ಲಿ ಒಟ್ಟು 1093 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕದ ಹರಡುವಿಕೆ ತಡೆಯಲು ರಾಜ್ಯ ಸರ್ಕಾರ ವಿಧಿಸಿರುವ ನಿಬರ್ಂಧಗಳ ಹಿನ್ನೆಲೆಯಲ್ಲಿ ಮೇ 5 ರಿಂದ 25 ರವರೆಗಿನ ಅವಧಿಗೆ ಅನುಸ್ಟಾನಗೊಳ್ಳುತ್ತಿರುವ 431 ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಇದುವರೆಗೂ ಒಟ್ಟು ರೂ.186.55 ಲಕ್ಷ ಗಳು ಆರ್ಥಿಕ ವೆಚ್ಚವಾಗಿರುತ್ತದೆ ಎಂದು ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮಿ ಅವರು ತಿಳಿಸಿದ್ದಾರೆ.

error: Content is protected !!