ಉದ್ಯಮಿ ಶವವಾಗಿ ಪತ್ತೆ

ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕುಶಾಲನಗರದ ಬಸವೇಶ್ವರ ಬಡಾವಣೆ ನಿವಾಸಿ ಮೂಕಾಂಬಿಕಾ ಅಟೋಮೊಬೈಲ್ಸ್ ಮಾಲೀಕ ಹರಿಪ್ರಸಾದ್ ಕೇಶವ್ ಶವವಾಗಿ ಪತ್ತೆಯಾಗಿದ್ದಾರೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಕಣಿವೆ ತೂಗುಸೇತುವೆ ಬಳಿ ದುಷ್ಕರ್ಮಿಗಳು ಹತ್ಯೆಗೈದು ಪ್ಲಾಸ್ಟರ್ ನಿಂದ ಕೈಕಾಲು ಕಟ್ಟಿ ನದಿಗೆ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.