ಉಚ್ಚ ನ್ಯಾಯಾಲಯದಿಂದ ಮಧ್ಯಂತರ ಆದೇಶ ಜಾರಿ

ಭಾಗಮಂಡಲ ತಲಕಾವೇರಿಯಲ್ಲಿರುವ ಶ್ರೀ ಭಗಂಡೇಶ್ವರ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ನೇಮಕಾತಿಯನ್ನು ಪ್ರಶ್ನೆಮಾಡಿ ಶ್ರೀ ಸುಬ್ಬಯ್ಯ, ಕಾಳಪ್ಪ ಮತ್ತು ದೇಚಮ್ಮ ಎಂಬ ಕೊಡಗಿನ ಸ್ಥಳೀಯರು ಉಚ್ಚ ನ್ಯಾಯಾಲಯದ ಮುಂದೆ ಪ್ರಶ್ನೆ ಮಾಡಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.

ವ್ಯವಸ್ಥಾಪಕ ಸಮಿತಿಯು ಸ್ಥಳೀಯ ಶಾಸಕರ ಪತ್ರದ ಆಧಾರಿತ ರಚನೆಯಾಗಿದೆ. ಶಾಸಕರಿಗೆ ಕಾನೂನಿನಲ್ಲಿ ಇಂಥ ಪತ್ರ ಬರೆಯುವ ಅಧಿಕಾರ ಇಲ್ಲ. ಕಾನೂನಿನ ಅಡಿಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿಗೆ ನೇಮಕಾತಿ ಮಾಡುವ ಅಧಿಕಾರವಿರುತ್ತದೆ. ಅದರಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಸಲ್ಲದು. ಸೆಕ್ಷನ್ 25ರಲ್ಲಿ ವಿಧಿಸಲಾದ ಷರತ್ತುಗಳ ಪ್ರಕಾರ ಇಬ್ಬರು ಮಹಿಳೆಯರು ಸಮಿತಿಯಲ್ಲಿ ಇರಲೇಬೇಕು. ಅದೇ ರೀತಿ ಒಬ್ಬ ಅರ್ಚಕರು ಕೂಡ ಸಮಿತಿಯಲ್ಲಿ ಸ್ಥಾನವನ್ನು ಪಡೆಯಬೇಕು. ಈ ಎರಡು ನಿಯಮಗಳು ಕೂಡ ಉಲ್ಲಂಘನೆಯಾಗಿದೆ. ಇಂದು ಈ ವಿಷಯವನ್ನು ಉಚ್ಚ ನ್ಯಾಯಾಲಯದ ಮುಂದೆ ಮಂಡಿಸಲಾಯಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಎ.ಎಸ್ ಪೊನ್ನಣ್ಣ ವಾದ ಮಂಡಿಸಿದ್ದರು. ವಾದವನ್ನು ಆಲಿಸಿದ ಉಚ್ಚ ನ್ಯಾಯಾಲಯ, ಸರ್ಕಾರ, ಧಾರ್ಮಿಕ ಪರಿಷತ್ ಸೇರಿ ಎಲ್ಲಾ ಪ್ರತಿವಾದಿಗಳಿಗೆ ನೋಟೀಸನ್ನು ಜಾರಿ ಮಾಡಿ ಮಧ್ಯಂತರ ಆದೇಶವನ್ನು ಜಾರಿಮಾಡಿದೆ.
ಮಧ್ಯಂತರ ಆದೇಶದ ಪ್ರಕಾರ ವ್ಯವಸ್ಥಾಪಕ ಸಮಿತಿಯು ಯಥಾಸ್ಥಿತಿಯನ್ನು ಕಾಪಾಡಲು ಸೂಚಿಸಲಾಗಿದೆ. ನೋಟಿಸ್ ಜಾರಿಯಾದ ನಂತರ ಉಚ್ಚನ್ಯಾಯಾಲಯ ಮುಂದಿನ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ .

error: Content is protected !!