ಉಚಿತ ತರಬೇತಿ

ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಮೊಬೈಲ್ ರಿಪೇರಿ ತರಬೇತಿ ಆರಂಭವಾಗಲಿದ್ದು, ಆಸಕ್ತರು ಇದಕ್ಕೆ ಹೆಸರು ನೊಂದಾಯಿಸಬಹುದಾಗಿದೆ.

ಎಪ್ರಿಲ್ 4ರಿಂದ ಮೇ 3ರವರೆಗೆ ತರಬೇತಿಯು 30 ದಿನಗಳ ಕಾಲ ನಡೆಯಲಿದ್ದು, 18 ರಿಂದ 45 ವರ್ಷದ ಒಳಗಿನ ಅಭ್ಯರ್ಥಿಗಳು ತರಬೇತಿಗೆ ಅರ್ಹರಾಗಿರುತ್ತಾರೆ. ಗ್ರಾಮೀಣ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಇರುತ್ತದೆ. ತರಬೇತಿ ಅವಧಿಯಲ್ಲಿ ಊಟ ಹಾಗು ವಸತಿ ವ್ಯವಸ್ಥೆ ಉಚಿತವಾಗಿರುತ್ತದೆ. ರೇಷನ್ ಕಾಡ್೯ ಎರಡು ಪ್ರತಿ ಜೆರಾಕ್ಸ್, 4 ಪಾಸ್ಪೋಟ್೯ ಸೈಜ್ ಪೊಟೋ ಹಾಗು ಆಧಾರ್ ಕಾಡ್೯ ಜೆರಾಕ್ಸ್ ಪ್ರತಿ ಇವಿಷ್ಟು ಅವಶ್ಯಕ ದಾಖಲೆಗಳಾಗಿರುತ್ತವೆ. ಆಸಕ್ತರು www.rudsetujire.com ನಲ್ಲಿ ಆನ್ಲೈನ್ ನೊಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 9591044014, 9900793675 ಸಂಖ್ಯೆಗಳನ್ನು ಸಂಪರ್ಕಿಸಬಹುದು.

error: Content is protected !!