ಉಚಿತ ಚಿಕಿತ್ಸೆ ನೀಡುವ ಖಾಸಗಿ ಕೋವಿಡ್ ಕೇಂದ್ರ ಆರಂಭ:ವಿ ಸೋಮಣ್ಣ ಚಾಲನೆ

ಕೊಡಗು: ಕೊವಿಡ್ ಅಲೆ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯ ಜನತೆಗೆ ಅನುಕೂಲ ಮಾಡಿಕೊಡುವ ಸಲುವಾಗಿ ದಕ್ಷಿಣಕೊಡಗಿನ ಗೋಣಿಕೊಪ್ಪದಲ್ಲಿ ಲೋಪಮುದ್ರೆ ಖಾಸಗಿ ಆಸ್ಪತ್ರೆಯ 30 ಬೆಡ್ ಗಳ ಕೊವಿಡ್ ಕೇಂದ್ರಕ್ಕೆ ಸಚಿವ ಸೋಮಣ್ಣ ಚಾಲನೆ ನೀಡಿದರು.

ಕರುಣಾ ಟ್ರಸ್ಟ್ ಸಹಯೋಗದೊಂದಿಗೆ ಆರಂಭವಾಗಿರುವ ಈ ಕೇಂದ್ರದಲ್ಲಿ 15 ಆಕ್ಸಜನ್ ಬೆಡ್ ಇದ್ದು ಸಾಮರ್ಥ್ಯ ಹೆಚ್ಚಿಸುವ ಚಿಂತನೆಯಿದ್ದು,ಆವರಣದಲ್ಲಿ ಆಕ್ಸಿಜನ್ ಉತ್ಪಾಧನ ಸ್ಥಾಪಿಸಲು ತಯಾರಿ ನಡೆಯುತ್ತಿದೆ. ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ಮತ್ತು ಊಟೋಪಚಾರ ಉಚಿತವಾಗಿದೆ. ಈ ಸಂದರ್ಭ ಸೋಮಣ್ಣ ಆಸ್ಪತ್ರೆ ಅಡಳಿತಕ್ಕೆ ಅಭಿನಂದನೆ ಸಲ್ಲಿಸಿ, ಇದೇ ರೀತಿ ಇತರೆ ಖಾಸಗಿ ಆಸ್ಪತ್ರೆಗಳು ಮುಂದೆ ಬರಬೇಕು ಎಂದು ಕರೆ ನೀಡಿದರು.

error: Content is protected !!