ಉಕ್ರೇನ್ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಧನ್ಯವಾದ ಹೇಳಿದ ಪ್ರಧಾನಿ ಮೋದಿ

ಉಕ್ರೇನ್ ಅಧ್ಯಕ್ಷ ವೊಲೊಡೆಮೈರ್ ಜೆಲೆನ್ ಸ್ಕಿ ಅವರಿಗೆ ದೂರವಾಣಿ ಕರೆ ಮಾಡಿ ಸುಮಾರು 35 ನಿಮಿಷ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದ್ದಾರೆ.

ಯುದ್ಧ ಪೀಡಿತ ಪ್ರದೇಶದಿಂದ ಭಾರತೀಯರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ನೆರವಾಗಿದ್ದಕ್ಕೆ ಉಕ್ರೇನ್ ಅಧ್ಯಕ್ಷರಿಗೆ ಧನ್ಯವಾದ ಹೇಳಿದರು.

ಇದೇ ವೇಳೆ ದಾಳಿ ನಡೆಸುತ್ತಿರುವ ರಷ್ಯಾ ಜೊತೆ ನೇರ ಮಾತುಕತೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಅಭಿನಂದಿಸಿದ್ದಾರೆ.

ರಷ್ಯಾ ದಾಳಿ ಕುರಿತು ಜೆಲೆನ್ ಸ್ಕಿ ಜೊತೆ ಸುಮಾರು 35 ನಿಮಿಷ ಮಾತುಕತೆ ನಡೆಸಿದ ಮೋದಿ, ಪ್ರಸ್ತುತ ಸನ್ನಿವೇಶಗಳ ಕುರಿತು ಚರ್ಚಿಸಿದರು. ಈ ವೇಳೆ ಸುಮಿಯಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಸದಾ ಪ್ರಯತ್ನಿಸುವುದಾಗಿ ಜೆಲೆನ್ ಸ್ಕಿ ಭರವಸೆ ನೀಡಿದ್ದರು ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

error: Content is protected !!