fbpx

ಈ ಬಾರಿಯ ದೀಪಾವಳಿಗೆ ಜಾಗೃತರಾಗೋಣ…

ಶತ್ರು ರಾಷ್ಟ್ರಕ್ಕೆ ಗುನ್ನಾ ನೀಡೋಣ ‘Vocal For Local’ ನೀತಿಯನ್ನು ಪಾಲಿಸಿ!

-ರಜತ್ ರಾಜ್ ಡಿ.ಹೆಚ್, ಮಡಿಕೇರಿ

ನಾಳೆ ಬೆಳಕಿನ ಹಬ್ಬ ದೀಪಾವಳಿ. ಕತ್ತಲ ವಿರುದ್ಧ ಬೆಳಕಿನ ಗೆಲುವೇ ಈ ಹಬ್ಬದ ಸಂದೇಶ. ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ದೀಪಾವಳಿ ಕೂಡ ಮುಂಚೂಣಿಯದ್ದು. ದೀಪಾವಳಿ ಎಂದ ಕೂಡಲೇ ನೆನಪಾಗೋದು ಪಟಾಕಿ, ಸುರ್ ಸುರ್ ಬತ್ತಿ, ಹೂ ಚಟ್ಟಿ, ಚಕ್ರ, ಗರ್ನಲ್, ರಾಕೆಟ್ ಇತ್ಯಾದಿ ಸಿಡಿ ಮದ್ದುಗಳು. ದೊಡ್ಡವರು, ಚಿಕ್ಕವರು ಎನ್ನದೆ ಎಲ್ಲರೂ ಸಂಭ್ರಮಿಸುವ ಆಚರಣೆಯೇ ಸಡಗರದ ಕಾರಣ ಈ ಹಬ್ಬದಲ್ಲಿ. ಕೆಲವೇ ವರ್ಷಗಳ ಹಿಂದೆ ಭಾರತಕ್ಕೆ ಸಿಡಿಮದ್ದುಗಳನ್ನು ಹಬ್ಬಕ್ಕಾಗಿ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. 2007-08ರ ಸಾಲಿನಲ್ಲಿ 38 ಬಿಲಿಯನ್ ಡಾಲರ್ ಮೊತ್ತದ ಸಿಡಿ ಮದ್ದುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಭಾರತ 2017-18ರ ಸಾಲಿನ ಹೊತ್ತಿಗೆ ಅದನ್ನು ದುಪ್ಪಟ್ಟಾಗಿಸಿ, 89.6 ಬಿಲಯನ್ ಡಾಲರ್ ಮೊತ್ತ ಹಣದ ಆಮದು ಮಾಡಿಕೊಳ್ಳುತ್ತಿತ್ತು. ಇದನ್ನು ಆಥಿ೯ಕತೆಯ ಕಮಿಟಿಯು, 'ಚೀನೀ ಉತ್ಪನ್ನಗಳ ಪರಿಣಾಮ ಭಾರತದ ಕೈಗಾರಿಕೆಗಳ ಮೇಲೆ ಎಷ್ಟಿದೆ?' ಎಂಬ ಕುರಿತು ವಿತ್ತೃತ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿತ್ತು.

ಅಷ್ಟೇ ಅಲ್ಲ, ಆ ಕಮಿಟಿ 2016-17ರಲ್ಲಿ ಡೈರೆಕ್ಟರ್ ಆಫ್ ರೆವೆನ್ಯೂ ಇಂಟಲಿಜೆನ್ಸ್ (ಡಿ.ಆರ್.ಐ) ಚೀನಾದ ಅಕ್ರಮ ಸಿಡಿ ಮದ್ದುಗಳ ಕಳ್ಳ ಸಾಗಾಣಿಕೆಯನ್ನು ತಡೆಯಲು ಶ್ರಮಿಸಿತ್ತು ಎಂಬುದನ್ನು ವರದಿಯಲ್ಲಿ ತಿಳಿಸಿತ್ತು. ಹಾಗಾಗಿಯೇ 2016-17ರ ಸಾಲಿನಲ್ಲಿ ಸುಮಾರು 1,024 ಕೋಟಿಯಷ್ಟು ಮೊತ್ತದ ಹಣದ ಸಿಡಿ ಮದ್ದುಗಳನ್ನು ಡಿ.ಆರ್.ಐ ವಶ ಪಡಿಸಿಕೊಂಡಿದೆ ಎಂದು ಗಮನಿಸಬೇಕಾದ ವಿಚಾರ.

ಈ ವರದಿಯಿಂದ ಎಚ್ಚೆತ್ತ ಭಾರತದ ನರೇಂದ್ರ ಮೋದಿ ಅವರ ಎನ್.ಡಿ.ಎ ಸರಕಾರ 2019ರಲ್ಲಿ ಈ ಬಗ್ಗೆ ಗಮನ ಹರಿಸಿ, ಕಾನೂನನ್ನು ಬಿಗಿಗೊಳಿಸಿತು. ಕಸ್ಟಮ್ ಆ್ಯಕ್ಟ್ 1962ರ ಅನ್ವಯ, 'ಯಾವುದೇ ವ್ಯಕ್ತಿಯು ಚೀನೀ ಸಿಡಿಮದ್ದುಗಳನ್ನು ಮಾರುತ್ತಿದ್ದರೂ, ಇಟ್ಟುಕೊಂಡಿದ್ದರೂ, ಖರೀದಿಸಿದರೂ, ಸಾಗಾಣಿಕೆ ಮಾಡಿದರೂ, ಅದು ಶಿಕ್ಷಾರ್ಹ ಅಪರಾಧವಾದುದು' ಎಂಬ ಕಾನೂನನ್ನು ಒತ್ತು ನೀಡಿ ಜಾರಿಗೊಳಿಸಲಾಯಿತು. ಜೊತೆಗೆ ಪ್ರಧಾನಿ ಮೋದಿ ಅವರು 'ಸ್ವಾವಲಂಭಿ ಭಾರತ' ಕನಸನ್ನು ಜನರ ಮನದಲ್ಲಿ ಗಟ್ಟಿಯಾಗಿ ಬಿತ್ತಲಾಯಿತು. ಕಸ್ಟಮ್ ಇಲಾಖೆಯನ್ನು ಬಲಗೊಳಿಸಿ, ಅದರ ಮೂಲಕ ಅಕ್ರಮ ಚೀನೀ ಸಿಡಿಮದ್ದುಗಳ ಆಮದನ್ನು ತಡೆಯಲಾಯಿತು. ಆಮದನ್ನು ಗಣನೀಯವಾಗಿ ಕಡಿಮೆಗೊಳಿಸಲಾಯಿತು. ಪರಿಣಾಮವಾಗಿ ಚೀನಾದ ಸಿಡಿಮದ್ದುಗಳ ಅಬ್ಬರ ಗಮನೀಯವಾಗಿ ಕಡಿಮೆಯಾಯಿತು.

ಇತ್ತೀಚೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್.ಎಸ್.ಎಸ್) ಅಂಗ ಸಂಘಟನೆಯೇ ಆದ ಸ್ವದೇಶಿ ಜಾಗರಣ್ ಮಂಚ್, 'ಚೀನಾದ ಸಿಡಿಮದ್ದುಗಳ ಆಮದಿನ ಮೇಲಿನ ನಿರ್ಬಂಧ ಹಾಗು ನಿಷೇಧವನ್ನು ಮುಂದುವರೆಸಬೇಕು. ಹಸಿರು ಬಣ್ಣದ ಮೇಡ್ ಇನ್ ಇಂಡಿಯಾ, ಮಾಲಿನ್ಯ ರಹಿತ ಪಟಾಕಿಗಳನ್ನೇ ಖರೀದಿಸಿ ಜನ ಸಂಭ್ರಮಿಸಬೇಕು. ಆ ಮೂಲಕ ದೇಶದ ಪೂರ್ಣ ಸ್ವಾವಲಂಭನೆಯ ಕಮಸಿಗೆ ಜನರು ಕೊಡುಗೆ ನೀಡಬೇಕು' ಎಂದು ಅಭಿಪ್ರಾಯ ಪಟ್ಟಿತ್ತು. ಆದರೆ ಎಲ್ಲಾ ಸಿಡಿಮದ್ದುಗಳ ನಿಷೇಧ ಸರಿಯಲ್ಲ ಎಂದೂ ಕೂಡ ಅದು ಅಭಿಮತಿಸಿದ್ದು, ತಮಿಳುನಾಡು, ಪಶ್ಚಮ ಬಂಗಾಳ ರಾಜ್ಯದ ಎಷ್ಟೋ ಮಿಲಿಯನ್ ಕುಟುಂಬಗಳು ಪಟಾಕಿ ಉದ್ಯಮವನ್ನೇ‌ ನಂಬಿಕೊಂಡು ಬದುಕು ಸಾಗಿಸುತ್ತಿದೆ ಎಂದಿದೆ. ನಾವೆಲ್ಲರೂ ನಾಳಿನ ಹಬ್ಬವನ್ನು ಸ್ವದೇಶಿ ಸಿಡಿಮದ್ದುಗಳನ್ನೇ ಸಿಡಿಸಿ ಸಂಭ್ರಮಿಸಿ ನಮ್ಮದೇ ದೇಶದ ಬಡ ಜನರ ಬಾಳಿಗೆ ಬೆಳಕಾಗೋಣ.

ಆ ಮೂಲಕ ವಿಷಕಾರಿ ಶತ್ರು ರಾಷ್ಟ್ರ ಚೀನಾದ ಸಿಡಿಮದ್ದುಗಳನ್ನು ಠುಸ್ಸ್ ಆಗಿಸೋಣ. ದೇಶದ ಸ್ವಾವಲಂಭನೆಗೆ ಕೊಡುಗೆ ನೀಡುವುದರೊಂದಿಗೆ ಪರಿಸರವನ್ನು ವಾಯು ಮಾಲಿನ್ಯದಿಂದ ತಡೆದು ಅರ್ಥಪೂರ್ಣವಾಗಿ ಆಚರಿಸೋಣ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಸಂದೇಶದಂತೆ 'Vocal For Local' ಆಗಿ ನಮ್ಮ ಹಬ್ಬದ ಆಚರಣೆ‌ ಮಾಡಿ ದೇಶ ಸೇವೆ ಮಾಡೋಣ. ಅದರೊಂದಿಗೆ ಡ್ರಾಗನ್ ರಾಷ್ಟ್ರ ಅದರ ಸಿಡಿಮದ್ದುಗಳಿಂದ ಉಗುಳುವ ಬೆಂಕಿ ಭಾರತೀಯ ಪಟಾಕಿ ಉದ್ಯಮದ ಕಾರ್ಮಿಕರ ಬದುಕು ಸುಟ್ಟು ಭಸ್ಮವಾಗಿಸದಿರಲಿ ಎಂಬುದೇ ಆಶಯ.

error: Content is protected !!