fbpx

ಈಶಾನ್ಯ ಸಾರಿಗೆ ಇನ್ನು ಮುಂದೆ ಕಲ್ಯಾಣ ಕರ್ನಾಟಕ ಸಾರಿಗೆ

ಕೆ.ಎಸ್.ಆರ್.ಟಿ.ಸಿ ಹೆಸರು ಕೇರಳದ ಪಾಲಾಗಿರುವ ಬೆನ್ನಲ್ಲೇ ರಾಜ್ಯದ ಈಶಾನ್ಯ ಸಾರಿಗೆ ಇಂದಿನಿಂದ ತನ್ನ ಹೆಸರು ಬದಲಾಯಿಸಿಕೊಂಡಿದೆ. ಇನ್ನು ಮುಂದೆ ಈಶಾನ್ಯ ಸಾರಿಗೆ ಕಲ್ಯಾಣ ಕರ್ನಾಟಕ ಸಾರಿಗೆ ಎಂದು ಬದಲಾಗಲಿದೆ ಎಂದು ಸಾರಿಗೆ ಸಚಿವ ಲಕ್ಮಣ ಸವದಿ ತಿಳಿಸಿದ್ದಾರೆ.

ಈಗಾಗಲೇ ಇದಕ್ಕೆ ಮುಖ್ಯಮಂತ್ರಿ ಅಧಿಕೃತ ಮುದ್ರೆ ಒತ್ತಿದ್ದು, ಇತರೆ ಭಾಗದ ಸಾರಿಗೆ ಸಹ ತನ್ನ ಹೆಸರು ಬದಲಾಯಿಸಿಕೊಳ್ಳುವ ಸಾಧ್ಯತೆಗಳಿದೆ.

error: Content is protected !!