ಈಜಲು ತೆರಳಿದ್ದ ಯುವಕ ನೀರುಪಾಲು!

ವಿರಾಜಪೇಟೆ ತಾಲ್ಲೂಕಿನ ಹೊಸಕೋಟೆ ಗ್ರಾಮದಲ್ಲಿ ನಡೆದ ದುರ್ಘಟನೆ ಇದಾಗಿದೆ.
ವಿರಾಜಪೇಟೆ ಪಟ್ಟಣದ ಶಾಂತಿನಗರದ ನಿವಾಸಿ ಅಹಮದ್ ಜೀಯಾನ್ 19 ಮೃತ ಯುವಕನೆಂದು ತಿಳಿದು ಬಂದಿದೆ. ಅಣ್ಣನೊಂದಿಗೆ ತೋಟದ ಕೆರೆಯಲ್ಲಿ ಈಜಾಡುತ್ತಿದ್ದ ವೇಳೆ ಮುಳುಗಿ ಸಾವು ಸಂಭವಿಸಿದೆ. ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.