fbpx

ಇರ್ಪುವಿಗೆ ಮುಕ್ತ ಪ್ರವೇಶ

ಕೊಡಗು(ಕುರ್ಚಿ): ಕೋವಿಡ್ ನಿಂದ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಭಂಧ ಹೇರಿದ್ದ ಬೆನ್ನಲ್ಲೆ ಕೊಡಗಿನಲ್ಲಿ ಒಂದೊಂದೇ ಪ್ರವಾಸಿ ತಾಣಗಳು ತೆರೆಯಲ್ಪಡುತ್ತಿದ್ದು, ಮಡಿಕೇರಿ ಸಮೀಪದ ಅಬ್ಬಿ ಜಲಪಾತಕ್ಕೆ ಅನುಮತಿ ನೀಡಿದ್ದ ಬೆನ್ನಲ್ಲೇ ನಾಗರಹೊಳೆ ಅಭ್ಯಯಾರಣ್ಯಕ್ಕೆ ಹೊಂದಿಕೊಂಡಿರುವ ಇರ್ಪು ರಾಮೇಶ್ವರ ಸನ್ನಿಧಿಯಲ್ಲಿರುವ ಇರ್ಪು ಜಲಪಾತ ಪ್ರವೇಶಕ್ಕೆ ಮುಕ್ತ ಗೊಳಿಸಲಾಗಿದೆ.
ಪ್ರಸಕ್ತ ವರ್ಷದಲ್ಲಿ ಉತ್ತಮಳೆಯಾಗಿದ್ದು ಕೊಡಗಿನತ್ತ ಪ್ರವಾಸಿಗರು ಹರಿದು ಬರುತ್ತಿರುವ ಕಾರಣ ರುದ್ರ ರಮಣೀಯವಾಗಿ ಧುಮ್ಮಿಕ್ಕುತ್ತಿರುವ ಜಲಪಾತಕ್ಕೆ ಪ್ರವೇಶ ನೀಡಲಾಗಿದೆ.

ಲಕ್ಷ್ಮಣ ಬಾಣ ಬಿಟ್ಟ:

ವನವಾಸದ ಸಂದರ್ಭ ಶಿವಲಿಂಗದ ಅಭಿಷೇಕ ಪೂಜೆಗೆ ಪವಿತ್ರ ನೀರಿಗಾಗಿ ರಾಮನಿಗಾಗಿ ಲಕ್ಷ್ಮಣ ಭೂಮಿಗೆ ಬಾಣ ಬಿಟ್ಟು ಪರಿಶುದ್ದ ನೀರನ್ನು ಬರುವಂತೆ ಮಾಡಿ ನೀರು ಚಿಲುಮೆಗೊಂಡು ನೀರನ್ನು ಪೂಜೆಗೆ ಬಳಸಿದಕ್ಕೆ ಶಿವನಿಗೆ ರಾಮೇಶ್ವರ ಎಂದು ಲಕ್ಷ್ಮಣ ಭಾಣ ಬಿಟ್ಟು ಹುಟ್ಟಿದ ನದಿಯ ನೀರು ಪವಿತ್ರ ವಾಗಿರುವ ಹಿನ್ನಲೆಯಲ್ಲಿ ಲಕ್ಷ್ಮಣ ತೀರ್ಥ ಎಂದು ನಾಮಾಂಕಿತಗೊಂಡಿದೆ ಎನ್ನುವ ಪ್ರತೀತಿ ಇದೆ.
ಐತಿಹಾಸಿಕ ಮತ್ತು ಪ್ರಕೃತಿ ಸೌಂದರ್ಯ ಇರುವ ಈ ಜಲಪಾತಕ್ಕೆ ಪ್ರವೇಶಕ್ಕೆ ಅರಣ್ಯ ಇಲಾಖೆ ಒಂದಿಷ್ಟು ಪ್ರವೇಶ ಶುಲ್ಕ ನಿಗದಿಪಡಿಸಿದ್ದು 6 ತಿಂಗಳ ಬಳಿಕ ನೋಡುವ ಭಾಗ್ಯ ದೊರೆತಿದೆ.

ಪವಿತ್ರ ಕ್ಷೇತ್ರ: ದಟ್ಟಾರಣ್ಯದ ನಡುವೆ ಇರುವ ಈ ಜಲಪಾತದ ಪ್ರವೇಶ ದ್ವಾರದಲ್ಲೇ ಇರ್ಪು ರಾಮೇಶ್ವರ ದೇವಾಲಯವಿದ್ದು,ಪ್ರತೀವರ್ಷ ಹುಣಸೂರು ,ಪಿರಿಯಾಪಟ್ಟಣದವರ ಜೀವನಾಡಿಯಾಗಿರುವ ಕಾರಣದಿಂದ ಆ ಭಾಗದವರು ಇಲ್ಲಿಗೆ ಆಗಮಿಸಿ ಪವಿತ್ರ ಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸುವ ವಾಡಿಕೆ ಜೊತೆ ಒಂದು ಜಾತ್ರೆಯ ವಾತಾವರಣ ನಿರ್ಮಾಣ ಮಾಡುತ್ತದೆ. ಶಿವರಾತ್ರಿ ಸಂದರ್ಭದಲ್ಲೂ ಇಲ್ಲಿನ ಕ್ಷೇತ್ರಕ್ಕೆ ಭಕ್ತರ ದಂಡೇ ಹರಿದು ಬರುತ್ತದೆ.
ಅಂದಾಜು ಎರಡು ಕಿಲೋಮೀಟರ್ ಕಾಲ್ನಡಿಗೆಯಲ್ಲೇ ತೆರಳಬೇಕಾದ ಈ ಸ್ಥಳದಲ್ಲಿ ಕೆಲವು ಅಭಿವೃದ್ದಿ ಕಾರ್ಯ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಜಲಪಾತ ನೋಡುವ ಉತ್ಸಾಹದಲ್ಲಿ ನಿಮ್ಮ ಎಚ್ಚರಿಕೆಯಿಂದ ಇದ್ದರೆ ಒಳಿತು.

error: Content is protected !!