fbpx

ಇನ್ನು ನಿರಾಶ್ರಿತರಿಗೆ ಹಂಚಿಕೆಯಾಗದ ಗ್ಯಾಸ್ ಸ್ಟವ್!

ಕೊಡಗು ಜಿಲ್ಲೆಯ ಮಾದಾಪುರದ ಜಂಬೂರುವಿನಲ್ಲಿ 2018ರ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮನೆಗಳನ್ನು ನೀಡುವ ಸಂದರ್ಭದಲ್ಲಿ tv9 ವತಿಯಿಂದ 265 ಸಂತ್ರಸ್ತರಿಗೆ ಗ್ಯಾಸ್ ಸ್ಟವ್ ಗಳನ್ನು ಹಂಚಿಕೆ ಮಾಡಲು ನೀಡಲಾಗಿತ್ತು.

ಆ ಸಮಯದಲ್ಲಿ ಕೊಡಗಿನ ಉಸ್ತುವಾರಿ ಸಚಿವರು ಕೆಲವು ಸಂತ್ರಸ್ತರಿಗೆ ಉದ್ಘಾಟನೆ ಸಮಯದಲ್ಲಿ ಗ್ಯಾಸ್ ಸ್ಟೋವ್ ಗಳನ್ನು ಹಂಚಿಕೆ ಮಾಡಿದ್ದಾರೆ ಜಂಬುರುವಿನ ಮನೆಗಳು ಉದ್ಘಾಟನೆಯಾಗಿ ಎರಡು ತಿಂಗಳು ಆದರೂ ಬಾಕಿ ಮನೆಗಳ ನಿರಾಶ್ರಿತರಿಗೆ ಗ್ಯಾಸ್ ಸ್ಟವ್ ಗಳನ್ನು ವಿತರಣೆ ಮಾಡದೆ ಒಂದು ಕೊಠಡಿಯಲ್ಲಿ ಹಾಕಿ ತುಕ್ಕು ಹಿಡಿಸುವ ಪರಿಸ್ಥಿತಿ ಬಂದಿದೆ ಇದು ಯಾಕೆ ಹೀಗಾಗಿದೆ ಇದಕ್ಕೆ ಯಾರು ಜವಾಬ್ದಾರಿ ಇಲ್ಲವೇ ಇದಕ್ಕೆ ಸಂಬಂಧಪಟ್ಟವರು ಆದಷ್ಟು ಬೇಗ ಇಲ್ಲಿನ ನಿರಾಶಿತರುಗಳಿಗೆ ಗ್ಯಾಸ್ ಸ್ಟೋವ್ ಗಳನ್ನು ಹಂಚಿಕೆ ಮಾಡಬೇಕು ಎಂದು ಮಡಿಕೇರಿ ನಗರ ಹಿತ‌ರಕ್ಷಣಾ ವೇದಿಕೆ ಆಗ್ರಹಿಸಿದೆ.

error: Content is protected !!