fbpx

‘ಇದು ಬರಿ ಮಣ್ಣಲ್ಲ’ ಕೃತಿಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ

ಮಡಿಕೇರಿ ಸೆ 6. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ದತ್ತಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಈ ದತ್ತಿಯನ್ನು ಗೌರಮ್ಮರವರ ಪುತ್ರ ಬಿ.ಜಿ.ವಸಂತ ರವರು ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ‌ಕೃತಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 16 ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದೆ. 2021-22 ನೇ ಸಾಲಿನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದ್ದು 12 ಲೇಖಕಿಯರು 16 ಕೃತಿಗಳನ್ನು ಪ್ರಶಸ್ತಿಗಾಗಿ ಪ್ರಸ್ತುತ ಪಡಿಸಿದ್ದರು.

ಜಿಲ್ಲೆಯ ಹಿರಿಯ ಮೂರು ಸಾಹಿತಿಗಳನ್ನು ತೀರ್ಪುಗಾರರನ್ನಾಗಿಸಿ ಅವರು ಎಲ್ಲ ಪುಸ್ತಕಗಳನ್ನು ಪರಮಾರ್ಶಿಸಿ‌ ಶ್ರೀಮತಿ ‌ಸಹನಾ ಕಾಂತಬೈಲು ರವರು ರಚಿಸಿದ ” ಇದು ಬರಿ ಮಣ್ಣಲ್ಲ” ಲಲಿತ ಪ್ರಬಂಧಕ್ಕೆ ‌ಈ ಪ್ರಶಸ್ತಿ ಲಭ್ಯವಾಗಿದೆ.

ಮಹಿಳಾ ಲೇಖಕಿಯನ್ನು ಸಾಹಿತ್ಯಿಕವಾಗಿ ಬೆಳೆಸಬೇಕು ಎನ್ನುವ ಅಭಿಲಾಷೆಯಿಮದ ಹದಿನೆಂಟು ವರ್ಷಗಳ ಹಿಂದೆ ಅಂದಿನ ಅಧ್ಯಕ್ಷರಾಗಿದ್ದ ಟಿ.ಪಿ.ರಮೇಶ್ ರವರ ಮುತುವರ್ಜಿಯಲ್ಲಿ ಪ್ರಾರಂಭಗೊಂಡ ಗೌರಮ್ಮ ದತ್ತಿನಿಧಿ ಪ್ರಶಸ್ತಿಯ ಹದಿನೇಳನೇ ಲೇಖಕಿಯನ್ನು ಈ ವರ್ಷ ಆರಿಸಲಾಗಿದೆ.

ಮೊಟ್ಟಮೊದಲ ಪ್ರಶಸ್ತಿಯು ಸಾಹಿತಿ ಶ್ರೀಮತಿ ನಯನ ಕಶ್ಯಪ್ ಭಾಜನರಾಗಿದ್ದರೆ ನಂತರದ ವರ್ಷಗಳಲ್ಲಿ ಸಾಹಿತಿಗಳಾದ ಶ್ರೀಮತಿ ಬೈತಡ್ಕ ಜಾನಕಿ ಬೆಳ್ಯಪ್ಪ, ಶ್ರೀಮತಿ ವಿಜಯ ವಿಷ್ಣುಭಟ್, ಶ್ರೀಮತಿ ಮಂಡೇಪಂಡ ಗೀತಾ ಮಂದಣ್ಣ, ಡಾ. ಎಂ.ಬಿ.ರೇಖಾ, ಡಾ. ಕೋರನ ಸರಸ್ವತಿ, ಶ್ರೀಮತಿ ಗೀತಾಭಾವೆ, ಶ್ರೀಮತಿ ಕಸ್ತೂರಿ ಗೋವಿಂದಮ್ಮಯ್ಯ, ಶ್ರೀಮತಿ ದಿನಮಣಿ ಹೇಮರಾಜ್, ಶ್ರೀಮತಿ ಶರ್ಮಿಳಾ ರಮೇಶ್, ಶ್ರೀಮತಿ ಮಿಲನಾ ಭರತ್, ಶ್ರೀಮತಿ ಸ್ಮಿತಾ ಅಮೃತರಾಜ್, ಶ್ರೀಮತಿ ಶಾಂತಿ ಅಪ್ಪಣ್ಣ, ಶ್ರೀಮತಿ ಸಂಗೀತಾ ರವಿರಾಜ್, ಡಾ. ಕಾವೇರಿ ಪ್ರಕಾಶ್ ಮತ್ತು ಶ್ರೀಮತಿ ಸುನಿತಾರವರು ಭಾಜನರಾಗಿದ್ದಾರೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!