fbpx

ಇತಿಹಾಸ ಮರುಕಳಿಸಲಿದೆ ವಿರಾಜಪೇಟೆ ಪಟ್ಟಣ

ವಿರಾಜಪೇಟೆ ತಾಲ್ಲೂಕು ಕೇಂದ್ರ ಇನ್ನು ಮುಂದೆ ಪುರಸಭೆಯಾಗಿ ಮಾರ್ಪಾಡಾಗುವ ಪ್ರಯತ್ನ ನಡೆದಿದ್ದು,ಪಟ್ಟಣ ಬೆಳೆಯುತ್ತಿರುವ ಹಿನ್ನಲೆ, ವಿಸ್ತೀರ್ಣದ ನಕ್ಷೆ ತಯಾರಿಸಿ ಜಿಲಾಧಿಕಾರಿಗಳಿಗೆ ನೀಡಲಾಗಿದ್ದು,ಅನುಮೋದನೆ ದೊರೆತ ಹಿನ್ನಲೆ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮಗಳಾದ ಮಗ್ಗುಲ, ಬಿಟ್ಟಂಗಾಲ, ಬೇಟೋಳಿ(ಬಹುತೇಕ),ಆರ್ಜಿ,ಕುಕ್ಕಲೂರು,ಅಂಬಟ್ಟಿ ಪ್ರದೇಶಗಳು ಪುರಸಭೆ ಸದ್ಯ ಪಟ್ಟಣ ಪಂಚಾಯ್ತಿಯ ವ್ಯಾಪ್ತಿಯಲ್ಲಿದ್ದು ಇನ್ನು ಮುಂದೆ ಪುರಸಭೆಗೆ ಸೇರುವ ಲಕ್ಷಣಗಳಿದೆ.ಪಟ್ಟಣದ 638.78 ಚದರ ಕಿಲೋಮೀಟರ್ ಪ್ರದೇಶ 901.70 ಚದರ ಕಿಲೋಮೀಟರ್ ನಷ್ಟು ವಿಸ್ಥೀರಣಗೊಂಡಿದ್ದು. ಕೊಡಗು ಪ್ರತ್ಯೇಕ ರಾಜ್ಯವಾಗಿದ್ದ ‘ಸಿ’ ಸರ್ಕಾರದ ಆಡಳಿತದದಲ್ಲಿ 1904ರಲ್ಲಿ ಇದ್ದ ಪುರಸಭೆ ಬಳಿಕ 1986ರವರೆಗೆ ಪುರಸಭೆಯಾಗಿಯೇ ಮುಂದುವರೆದು ,1986 ರಿಂದ ಮಂಡಲ ಪಂಚಾಯ್ತಿಯಾಗಿ,ಏಳು ತಿಂಗಳು ಗ್ರಾಮಪಂಚಾಯ್ತಿಯಾಗಿ 1996ರಲ್ಲಿ ಪಟ್ಟಣಪಂಚಾಯ್ತಿಯಾಗಿದ್ದು,ಇದೀಗ ಜನಸಂಖ್ಯ ಆದಾರದ ಮೇಲೆ ಮತ್ತೆ ಇತಿಹಾಸದ ಪುರಸಭೆಯಾಗಲಿದೆ.

error: Content is protected !!