ಇಂದು ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಶಿಶಿಕ್ಷು ಮೇಳ

ಮಡಿಕೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇಂದು ರಾಷ್ಟ್ರೀಯ ಶಿಶಿಕ್ಷು ಮೇಳ ಜರುಗಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಪ್ರಾಚಾರ್ಯರು ಹಾಗೂ ಉಪ ನಿರ್ದೇಶಕರಾದ ಶ್ರೀ ಪಂಡಿತಾರಾಧ್ಯ ಅವರು ವಿದ್ಯಾರ್ಥಿಗಳು ವೃತ್ತಿಪರ ಕೌಶಲ್ಯ ಹೆಚ್ಚಿಸಿಕೊಂಡು ಉದ್ಯೋಗ ಪಡೆಯುವತ್ತ ಗಮನಹರಿಸುವಂತಾಗಬೇಕು ಎಂದರು.
ಐಟಿಐ ಉತ್ತೀರ್ಣರಾದವರು ಅಪ್ರೆಂಟಿಸ್ ತರಬೇತಿ ಪಡೆದು ಹೆಚ್ಚಿನ ಉದ್ಯೋಗಾವಕಾಶ ಪಡೆಯಬಹುದಾಗಿದೆ. ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ವೃತ್ತಿ ಕೌಶಲ್ಯ ಅಭಿವೃದ್ಧಿಗೆ ಎಲ್ಲಾ ರೀತಿಯ ಮಾರ್ಗದರ್ಶನ ನೀಡಲಾಗುವುದು ಎಂದು ಅವರು ಹೇಳಿದರು.

ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ರಘು ಅವರು ಮಾತನಾಡಿ ಕೈಗಾರಿಕೆ ಇಲಾಖೆ ಉದ್ಯಮಶೀಲತಾ ತರಬೇತಿ ನೀಡುವುದರ ಜೊತೆಗೆ, ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಪೊನ್ನಂಪೇಟೆ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್ ಅವರು ಮಾತನಾಡಿ ವಿದ್ಯಾರ್ಥಿಗಳು ವೃತ್ತಿ ಕೌಶಲ್ಯ ಬೆಳೆಸಿಕೊಂಡು, ಅಭಿವೃದ್ಧಿಯತ್ತ ಸಾಗಬೇಕಿದೆ. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ನೀಡಲಾಗುವ ಅಪ್ರೆಂಟಿಸ್ ತರಬೇತಿಯನ್ನು ಸರಿಯಾಗಿ ಬಳಸಿಕೊಳ್ಳುವಂತೆ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೆವಿಜಿ ಐ ಟಿ ಐ ಭಾಗಮಂಡಲದ ಪ್ರಾಂಶುಪಾಲರಾದ ಶ್ರೀ ಶ್ರೀಕಾಂತ್, ಆಲೂರು ಸಿದ್ದಾಪುರ ಐಟಿಐ ಸಂಸ್ಥೆಯ ತರಬೇತಿ ಅಧಿಕಾರಿ ಗಂಗಾಧರ್, ಮಡಿಕೇರಿ ಐಟಿಐ ಸಂಸ್ಥೆಯ ತರಬೇತಿ ಅಧಿಕಾರಿ ಇಂದ್ರೇಶ್ ಹಾಗೂ ಸೂರ್ಯನಾರಾಯಣ, ಉಪನ್ಯಾಸಕರಾದ ಗುರುಕೃಷ್ಣ, ಅಶೋಕ್, ಕೆವಿಜಿ ಐ ಟಿ ಐ ಭಾಗಮಂಡಲದ ವೆಂಕಟೇಶ್, ಕೃಷ್ಣಮೂರ್ತಿ ಹಾಗೂ ಎಲ್ಲಾ ಸಂಸ್ಥೆಗಳ ಉಪನ್ಯಾಸಕರು ಭಾಗವಹಿಸಿದರು.