ಇಂದು ನಡೆದ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾ ಸಭೆ

ಸಂಪಾಜೆ: ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಸಂಪಾಜೆ ಇದರ 2021-22 ರ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅದ್ಯಕ್ಷರಾದ ಶ್ರೀ. ಯನ್.ಸಿ.ಅನಂತ್ ಊರುಬೈಲು ರವರ ಅಧ್ಯಕ್ಷತೆಯಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಇಂದು ಯಶಸ್ವಿಯಾಗಿ ನಡೆಯಿತು.

ಕಳೆದ ಅವಧಿಯಲ್ಲಿ ಸಂಸ್ಥೆ 202 ಕೋಟಿಗೂ ಮಿಗಿಲಾಗಿ ವ್ಯವಹಾರ ಮಾಡಿ ರೂ 31 ಲಕ್ಷಕ್ಕೂ ಮಿಗಿಲಾಗಿ ಲಾಭ ಗಳಿಸಿದ್ದು ,ಸದಸ್ಯರಿಗೆ 8.50%
ಡಿವಿಡೆಂಡ್ ಘೋಷಿಸಲಾಯಿತು.

ಸಂಘವು ಸತತವಾಗಿ ಎರಡನೇ ವರ್ಷ ಕೂಡ ಪ್ರಶಸ್ತಿ ಪಡೆದ ಸಾಧನೆಗಾಗಿ ಅದ್ಯಕ್ಷರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗಕ್ಕೆ ಸದಸ್ಯರ ಪರವಾಗಿ ಶ್ರೀ. ಬಿ.ಆರ್ ಶಿವರಾಮ ರವರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿದಲ್ಲದೆ ,ಜಿಲ್ಲೆಗೆ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರಿ ಇಂಚರ.ಬಿ.ಎಂ ರವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರು .ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಸಿಬ್ಬಂದಿ ವರ್ಗ ,ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ : ಶಭರೀಶ್ ಕುದ್ಕಳಿ ಸಂಪಾಜೆ

error: Content is protected !!