ಇಂದಿರಾ ಬದಲು ಕಾವೇರಿ ಎಂದು ಕ್ಯಾಂಟೀನಿಗೆ ಹೆಸರಿಡಿ: ಶಾಸಕ ರಂಜನ್ ಒತ್ತಾಯ

ಇಂದಿರಾ ಕ್ಯಾಂಟೀನ್ ಬದಲು ಕಾವೇರಿ ಕ್ಯಾಂಟೀನ್ ಎಂದು ಮರು ನಾಮಕರಣ ಮಾಡಲು ಶಾಸಕ ಅಪ್ಪಚ್ಚು ರಂಜನ್ ಒತ್ತಾಯ ಮಾಡಿದ್ದಾರೆ.
ಕಾವೇರಿ ನದಿ ಮೂರು ರಾಜ್ಯಗಳಿಗೆ ನೀರುಣಿಸುತ್ತಿದ್ದಾಳೆ. ಕರ್ನಾಟಕ ಮತ್ತು ಪಕ್ಕದ ತಮಿಳುನಾಡಿಗೆ ಕಾವೇರಿ ನದಿ ಜೀವನದಿಯಾಗಿರುವಳು. ಹಾಗಾಗಿ ಇಂದಿರಾ ಕ್ಯಾಂಟೀನಿಗೆ ಕಾವೇರಿ ಕ್ಯಾಂಟೀನ್ ಎಂದು ಮರುನಾಮಕರಣ ಮಾಡಬೇಕೆಂಬ ಒತ್ತಾಯವನ್ನು ಮಡಿಕೇರಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ರಾಜ್ಯ ಸರಕಾರಕ್ಕಿಟ್ಟರು.