ಇಂದಿನಿಂದ ನೈಟ್ ಕರ್ಫೂ ಜಾರಿ!

ಬೆಂಗಳೂರು: ಲಂಡನ್ ನಲ್ಲಿ ಕಂಡು ಬಂದ ಕೊರೊನಾ ರೂಪಾಂತರ ಜನರನ್ನು ಭಯಭೀತಿಗೊಳಿಸಿದ್ದು, ಕರ್ನಾಟಕದಲ್ಲೂ ಹೊಸ ಕೊರೊನಾ ತಡೆಗೆ ಮುಂಜಾಗ್ರತ ಕ್ರಮವಾಗಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ನಿನ್ನೆಯಿಂದ ಕರ್ಫ್ಯೂ ಇರಲಿದೆ ಎಂದಿದ್ದ ಸಿಎಂ ಇಂದಿನಿಂದ ಜಾರಿಯಾಗುವಂತೆ ಆದೇಶ ಹೊರಡಿಸಿದ್ದರು. ಹೀಗಾಗಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿಯಾಗಲಿದೆ. ಆದ್ರೆ ಯಾರು ಕೂಡ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ. ಯಾಕಂದ್ರೆ ಎಲ್ಲವೂ ನಿತ್ಯ ಹೇಗಿರುತ್ತಿತ್ತೋ ನೈಟ್ ಕರ್ಫ್ಯೂ ನಲ್ಲೂ ಅದೇ ರೀತಿಯ ಸೌಲಭ್ಯಗಳಿರುತ್ತವೆ.

ದೂರದ ಊರುಗಳಿಗೆ ಟ್ರಾವೆಲ್ ಮಾಡೋರಿಗೂ ಯಾವುದೇ ತೊಂದರೆ ಆಗಲ್ಲ. ನೀವು ತಲುಪೋದು ಲೇಟ್ ನೈಟ್, ಅರ್ಲಿ ಮಾರ್ನಿಂಗ್ ಆದ್ರು ಮನೆಗೆ ಹೋಗಲು ಆಟೋ-ಟ್ಯಾಕ್ಸಿಗಳು ಎಂದಿನಂತೆ ಸಿಗಲಿವೆ. ಲಾಂಗ್ ಡಿಸ್ಟನ್ಸ್ ಬಸ್ ಗಳು, ಟ್ರೈನ್ ಗಳಲ್ಲೂ ಯಾವುದೇ ವ್ಯತ್ಯಾಸ ಆಗಲ್ಲ.

ನೀವು ಇಳಿದುಕೊಳ್ಳುವ ನಿಲ್ದಾಣಗಳಿಂದ ಎಂದಿನಂತೆ ಸಿಗತ್ತೆ ಆಟೋ-ಟ್ಯಾಕ್ಸಿ. ಆದರೇ ಪೊಲೀಸರಿಗೆ ಸೂಕ್ತ ಟ್ರಾವೆಲ್ ಟಿಕೆಟ್ ತೋರಿಸೋದು ಕಡ್ಡಾಯವಾಗಿ ತೋರಿಸಬೇಕಾಗುತ್ತದೆ.

ಆದ್ರೆ ಇ ಸಮಯದಲ್ಲಿ ಬೇಕಾಬಿಟ್ಟಿ ಓಡಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರು ಸೂಚಿಸಿದ್ದಾರೆ. ಹೀಗಾಗಿ ರಾತ್ರಿ ಓಡಾಡುವ ಮುನ್ನ ಎಚ್ಚರದಿಂದಿರಬೇಕು. ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ( ಎಸ್ಪಿ) ಗಳಿಗೆ ಗೃಹ ಸಚಿವ ಬಸವರಾಜ್ ಬೊಮ್ಮಯಿ ಸೂಚನೆ ನೀಡಿದ್ದಾರೆ. ರಾತ್ರಿ ಹನ್ನೊಂದರ ಬಳಿಕ ರಸ್ತೆಗೆ ಇಳಿಯುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಅಗತ್ಯ ಸೇವೆ ಮತ್ತು ನೈಟ್ ಶಿಫ್ಟ್ ಲ್ಲಿ ಕೆಲಸ ಮಾಡ್ತಿರುವವರನ್ನ ಹೊರತುಪಡಿಸಿ ಯಾರಾದರೂ ರಸ್ತೆಗೆ ಇಳಿದ್ರೆ ಅಂಥವರ ವಿರುದ್ಧ ಕೇಸ್ ದಾಖಲಿಸುವಂತೆ ಸೂಚನೆ ನೀಡಲಾಗಿದೆ.

error: Content is protected !!