ಇಂಡಿಯಾ-ಆಸ್ಟೇಲಿಯಾ ಟೆಸ್ಟ್ ಸರಣಿಯಲ್ಲಿ ಮುಂದಿನ ಸವಾಲುಗಳು…!

ಅಂಕಣ:ಕ್ರೀಡಾ ಸಂತೆ

ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ನಂಬಲಸಾಧ್ಯ ರೀತಿಯಲ್ಲಿ ಭಾರತ ಸೋಲನಪ್ಪಿತ್ತು. ಅಭಿಮಾನಿಗಳು ಈಗಲೂ ಇದನ್ನೊಪ್ಪಿಕೊಳ್ಳಲು ತಯಾರಿಲ್ಲ. ಪ್ರಥಮ ಟೆಸ್ಟಿನ ಪ್ರಥಮ ಇನ್ನಿಂಗ್ಸ್ ಅಲ್ಲಿ ಭಾರತ ಉತ್ತಮ ಆಟವನ್ನೇ ಪ್ರದರ್ಶಿಸಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್ ಅಲ್ಲಿ ಭಾರೀ ಬ್ಯಾಟಿಂಗ್ ಕುಸಿತ ಕಂಡು ಹೀನಾಯ ಸೋಲು ಅನುಭವಿಸಿತು. ಹಾಗಾದರೆ ಕುಸಿತಕ್ಕೆ ಕಾರಣಗಳೇನು…? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಪರಾಮರ್ಶೆ ನಡೆಸಿದಾಗ ಕೆಲವೊಂದು ಕಾರಣಗಳು ಘೋಚರಿಸುವುವು. ಇವು ಮುಂದಿನ ಟೆಸ್ಟ್ ಗಳಿಗೆ ಸವಾಲುಗಳಾಗೆ ಪರಿಣಮಿಸಲಿವೆ.

ಹರೀಶ್ ಸರಳಾಯ, ಅಂಕಣಕಾರರು.

ಬ್ಯಾಟಿಂಗ್ ಕುಸಿತ: ಭಾರತದ ಕ್ರಿಕೆಟ್ ತಂಡ ಬ್ಯಾಟಿಂಗಲ್ಲಿ ಬಲಿಷ್ಠ ತಂಡವೆಂದೇ ಪರಿಗಣಿಸಲ್ಪಟ್ಟಿದೆ. ಆದರೆ ತಂಡ ದುರಾದೃಷ್ಟವಶಾತ್ ಅದರ ಕ್ರೀಡಾ ಛಾಪನ್ನು ಸದ್ಯ ಕಳೆದುಕೊಂಡಿದೆ. ಇತ್ತೀಚೆಗೆ ಟೀಂ ಇಂಡಿಯಾ ಕ್ರಿಕೆಟ್ ದಾಂಡಿಗರ ಪಡೆ ಪೆವಿಲಿಯನ್ನಿಗೆ ಪೆರೇಡ್ ನಡೆಸಿದ್ದರು ಕ್ರೀಡಾಂಗಣದಲ್ಲಿ. ಪ್ರಥಮ ಇನ್ನಿಂಗ್ಸ್ ಅಲ್ಲೇ ಬೃಹತ್ ಸ್ಕೋರ್‌ ಕಲೆ ಹಾಕಬಹುದಿತ್ತು. ಅಲ್ಲೂ ಎಡವಿದರು. ಆದರೂ ವಿಜಯಲಕ್ಷ್ಮಿ ಭಾರತದ ಪರವೇ ಇದ್ದಳು. ಎರಡನೇ ಇನ್ನಿಂಗ್ಸ್ ಅಲ್ಲಿ ದೊಡ್ಡ ಮೊತ್ತ ಕಲೆ ಹಾಕಿದ್ದರೆ, ವಿಜಯ ಸಲೀಸಾಗಿ ಸಿಗುತ್ತಿತ್ತು. ಘಟಾನುಘಟಿ ಬ್ಯಾಟ್ಸ್ ಮೆನ್ ಗಳಾದ ಕೊಹ್ಲಿ, ಪೂಜಾರ, ಮಯಾಂಕ್, ರಹಾನೆ ಇವರುಗಳೇ ಕೈಕೊಟ್ಟರು. ಬ್ಯಾಟಿಂಗೇ ಮರೆತಂತೆ ಬೇಜವಾಬ್ದಾರಿ ಆಟ ಪ್ರದರ್ಶಿಸಿದರು.

ಫೀಲ್ಡಿಂಗ್ ಸಮಸ್ಯೆ:

ಅನಾವಶ್ಯಕ ರನ್ನುಗಳು, ಕ್ಯಾಚ್ ಗಳನ್ನು ಬಿಟ್ಟು ಫಿಲ್ಡಿಂಗ್ ಅಲ್ಲಿ ತೀರಾ ಕೆಟ್ಟ ಆಟ ಪ್ರದರ್ಶಿಸಿದ್ದರು.

ಬೌನ್ಸ್ ಪಿಚ್:

ಆಸ್ಟ್ರೀಲಿಯಾ ಪಿಚ್ ಅಂದಾಗ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿ.ವಿ.ಎಸ್ ಲಕ್ಷ್ಮಣ್, ಅಗರ್ಕರ್ ಮುಂತಾದ ಅಗ್ರಗಣ್ಯ ಆಟಗಾರರ ನೆನಪು ಈಗಲೂ ಆಗುತ್ತದೆ. ಪ್ರತಿ ಬಾರಿ ಪ್ರವಾಸದಲ್ಲಿ ಒಳ್ಳೆಯ ಆಟವಾಡುತ್ತಿದ್ದರು. ಆದರೆ ಪೂಜಾರ, ರಹಾನೆ, ಮಾಯಂಗ್, ವಿಹಾರಿ ಅವರೆಲ್ಲಾ ಆ ಮಟ್ಟಕ್ಕೆ ಆಡುವ ಸುಳಿವನ್ನೂ ನೀಡಿಯೇ ಇಲ್ಲ. ಎದೆ ಮಟ್ಟಕ್ಕೆ ಬರುವ ಚೆಂಡುಗಳನ್ನು ಅದರಲ್ಲೂ ಆಸ್ಟ್ರೇಲಿಯನ್ನರ ಬೆಂಕಿ ಚೆಂಡುಗಳನ್ನು ಎದುರಿಸುವ ತಾಕತ್ತು ತೋರಲೇ ಇಲ್ಲ. ನಾಯಕನಾಗಿ ವಿರಾಟ್ ಕೊಹ್ಲಿ ಆತ್ಮ ವಿಶ್ವಾಸ ಮೂಡಿಸುವಲ್ಲಿ ವಿಫಲರಾದರೆಂದೇ ಅನ್ನಿಸುತ್ತದೆ. ಬ್ಯಾಟಿಂಗ್ ವಿಫಲತೆಯಲ್ಲಿ ಅನುಭವದ ಕೊರತೆಯೂ ಕಂಡಿತು. ಕೆಳ ಕ್ರಮಾಂಕವಂತೂ ಕ್ಷಣಗಳಲ್ಲೇ ಮುಗ್ಗರಿಸಿತು.

ಮೆಚ್ಚುಗೆ ಗಳಿಸಿದ ಬೋಲಿಂಗ್

ಬೋಲಿಂಗ್ ಅಲ್ಲಿ ಭಾರತ ಉತ್ತಮ ಪ್ರದರ್ಶನವನ್ನೇ ನೀಡಿತು. ಬ್ಯಾಟಿಂಗ್ ಅಲ್ಲಿ ಆರಂಭಿಕ ಬ್ಯಾಟ್ಸ್ ಮೆನ್ ಗಳು ಉತ್ತಮ ಅಡಿಪಾಯ ಹಾಕಿಕೊಡುವಲ್ಲಿ ಸಫಲರಾಗಲಿಲ್ಲ.

ಸವಾಲುಗಳು:

ಭಾರತ ತಂಡದಲ್ಲಿ ಬದಲಾವಣೆಗಳಂತೂ ಖಂಡಿತ. ಆರಂಭಿಕ ಬ್ಯಾಟಿಂಗ್ ಬಲಗೊಳ್ಳಬೇಕು. ಮರಳಿ ಆತ್ಮ ವಿಶ್ವಾಸ ತುಂಬುವಲ್ಲಿ ನಾಯಕನ ಪಾತ್ರ ಬಹಳ ಮುಖ್ಯ. ಗಾಯಾಳು ಶಮಿ ಬದಲು ಇಶಾಂತ್ ಶರ್ಮಾರಂತಹ ಅನುಭವಿ ವೇಗಿಗೆ ಅವಕಾಶ ದೊರೆಯಬೇಕು. ಫೀಲ್ಡಿಂಗ್ ಸುಧಾರಣೆಯೊಂದಿಗೆ ಬ್ಯಾಟಿಂಗ್ ಅಲ್ಲಿ ಬಲಾಢ್ಯವಾದರೆ ಕ್ಯಾಂಗರೂ ಕ್ರಿಕೆಟ್ ತಂಡವನ್ನು ಸೋಲನ್ನುಣಿಸಬಹುದೇನೋ?!

ಹಂ…46 ವರ್ಷಗಳ ದಾಖಲೆ ಪಥನವಾಗಿದೆ!

ಭಾರತ ತಂಡವು 42 ಕನಿಷ್ಟ ಟೆಸ್ಟ್ ಮೊತ್ತದಿಂದ 36ಕ್ಕೆ ಜಾರಿ ದಾಖಲೆ ಮುಂದಾದರೂ ಮುಂದೆ ಬರಲಿ ಎಂಬುದೇ ಕ್ರಿಕೆಟ್ ಪ್ರೇಮಿಗಳ ಆಶಯ.

error: Content is protected !!