fbpx

ಆ ದಿನಗಳು…! ‘ಸುಬೇದಾರ್ ಸುಳ್ಯಕೋಡಿ ಮಾದಪ್ಪ’

ರಾಷ್ಟ್ರ ರಕ್ಷಕರು EPISODE- 09

ಗಿರಿಧರ್ ಕೊಂಪುಳೀರಾ

ಭಾರತೀಯ ಸೇನೆ ಕಷ್ಟದ ದಿನಗಳನ್ನು ಎದುರಿಸುತ್ತಿದ್ದ ವರ್ಷವದು,ನೆಹರು ಪ್ರಧಾನಿಯಾಗಿದ್ದರು 1965 ರ ಯುದ್ದ ನಂತರ ಒಂದಷ್ಟು ಸುಧಾರಣೆಗಳು ನಡೆಯುತ್ತಿತ್ತಾದರೂ ಆರ್ಥಿಕತೆ ಸರಿ ದೂಗಿಸಲು ಅಷ್ಟೇನು ಸೌಲಭ್ಯಗಳು ಸೈನಿಕರಿಗೆ ಸಿಗುತ್ತಿರಲಿಲ್ಲ ಉತ್ತಮ ಆಹಾರ, ವಸತಿ ನಿಲಯಗಳು,
ಶೌಚಾಲಯಗಳು ಇರುತ್ತಿರಲಿಲ್ಲ. ದಯನೀಯ ಸ್ಥಿತಿಯಲ್ಲೂ ನಮ್ಮ ಸೈನಿಕರು ದೇಶ ಸೇವೆ ಮಾಡುತ್ತಿದ್ದರು. ಹೀಗೆ ಮಾತಿಗಿಳಿದ ಸುಬೇದಾರ್ ಸುಳ್ಯಕೋಡಿ ಮಾದಪ್ಪರ ಇನ್ನಷ್ಟು ಮಾತುಗಳು ನಿಮ್ಮ ಮುಂದೆ.

ಮಡಿಕೇರಿ ತಾಲ್ಲೂಕಿನ ಚೆಟ್ಟಿಮಾನಿಯ ಸಿಂಗತ್ತೂರುವಿನಲ್ಲಿ 1952,ಮಾರ್ಚ್ 23 ರಂದು ರಾಮಣ್ಣ ಮತ್ತು ಬೆಳ್ಯಮ್ಮ ದಂಪತಿಗಳಿಗೆ ಜನಿಸಿದ ಇವರು ಏಳು ಮಕ್ಕಳ ಪೈಕಿ ಒಬ್ಬರು ಚೆಟ್ಟಿಮಾನಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮಾದಪ್ಪರವರು ಅಂದಿನ ಕಾಲದಲ್ಲೇ ಪಿಯುಸಿಯನ್ನು ಭಾಗಮಮಂಡಲ ಕಾವೇರಿ ಕಾಲೇಜಿನಲ್ಲಿ ಮುಗಿಸಿದ್ದರು.

ವಿರಾಜಪೇಟೆಯಲ್ಲಿ 1971ರಲ್ಲಿ ಸೇನಾ ನೇಮಕಾತಿಗೆ ತೆರಳಿದ್ದ ಇವರು ಯಾವ ಹುದ್ದೆಯಾದರೂ ಸರಿ ಸೇನೆಗೆ ಸೇರ್ಪಡೆಯಾಗುವುದು ಮುಖ್ಯವಾಗಿದೆ ಎಂದು
ಕಡಿಮೆ ಸಂಬಳಕ್ಕೆ ದೇಶ ಸೇವೆ ಮಾಡಲು ಅದೆಷ್ಟೋ ಮಂದಿ ಕೊಡಗಿನವರ ಪೈಕಿ ಮಾದಪ್ಪನವರೂ ಒಬ್ಬರು ಸೇನೆಗೆ ಆಯ್ಕೆಯಾದರು. ಬಳಿಕ ಬೆಂಗಳೂರಿನಲ್ಲಿ ತರಬೇತಿ ಪಡೆದು ಇವರಿಗೆ ಸಿಕ್ಕಿದ್ದು ಸೇನೆಯ ವೈದಕೀಯ ಸೇವೆ ಒದಗಿಸುವ ಇಂಡಿಯನ್ ಆರ್ಮಿ ಮೆಡಿಕಲ್ ಕಾರ್ಪ್ ನಲ್ಲಿ ಒಂದು ಕ್ಲರಿಕಲ್ ಹುದ್ದೆ. ಇವರ ವಿಭಾಗದಲ್ಲಿ ದಾದಿಯರು,ಲ್ಯಾಬ್ ಟೆಕ್ನೀಷಿಯನ್ ಹೀಗೆ ವೈದಕೀಯ ವಿಭಾದಲ್ಲಿ ಕಡತಗಳ ಕಚೇರಿಯಲ್ಲಿ ಕೆಲಸ.

ರೆಕಾಡ್೯ ಕಛೇರಿಯಲ್ಲಿ ಸುಬೇದಾರ್ ಮಾದಪ್ಪ ಅವರು ಕರ್ತವ್ಯ ನಿರ್ವಹಿಸುತ್ತಿರುವ ಚಿತ್ರ

ದ್ವಿತೀಯ ದರ್ಜೆಯ ಹುದ್ದೆ ತರಬೇತಿ ಪಡೆದು ಮಹಾರಾಷ್ಟ್ರದ ಔರಂಗಬಾದ್, ಅಸ್ಸಾಂ, ತ್ರಿಪುರಾ, ಪುನಾದ ವೈದಕೀಯ ಕಾಲೇಜು,ಲಕ್ನೋ ಬಳಿಕ ಬಬಿನಾ ಜಾನ್ಸಿ ನಲ್ಲಿ ಸಂಚಾರಿ ಆಂಬುಲೆನ್ಸ್. ಪಂಜಾಬ್ ನ ಬಟಿಯಾಲ,ಭಾರತ ಚೀನಾ ಗಡಿಯ ಶಾಂಗೈ,ಅಸ್ಸಾಂ ಬಳಿಕ ಕೇರಳದ ಟ್ರಿವೆಂಡ್ರಂನ ಸೇನಾ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ 1999 ರಲ್ಲಿ ಹೆಡ್ ಕ್ಲರ್ಕ್ ಆಗಿ ಬಡ್ತಿ ಪಡೆದು ಲಕ್ನೋದಲ್ಲಿ ನಿವೃತ್ತಿ ಹೊಂದಿದರು.

ಅಂದಿನ ಸಂಕಷ್ಟಕರ ಸ್ಥಿತಿಯಲ್ಲಿ ನಮ್ಮ ಸೈನಿಕರು (ಸಾಂದರ್ಭಿಕ ಚಿತ್ರ)

ಕಷ್ಟದ ದಿನಗಳವು…

ಹೀಗೆ ಹತ್ತು ಹಲವು ಕಡೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದರೂ ಆರಂಭದಲ್ಲಿ ಸಾಕಷ್ಟು ಕಷ್ಟದ ದಿನಗಳನ್ನು ಅನುಭವಿಸಿದ್ದಾರೆ ಸಾಮಾನ್ಯ ಸೈನಿಕನಿಗೆ ಹೊಲಿಸಿದರೆ, ಒಂದು ಹಂತದ ಚಿಕ್ಕ ಅಧಿಕಾರಿಯ ಸ್ಥಾನ ಮಾನ ಇವರಿಗೆ ಇತ್ತಾದರೂ ಅದಕ್ಕೆ ತಕ್ಕನಾದ ಗೌರವ ಇರುತ್ತಿರಲಿಲ್ಲ ಇಂದಿನ ದಿನದಲ್ಲಿರುವಂತೆ ಪ್ರತ್ಯೇಕ ಕೊಠಡಿಗಳಿರುತ್ತಿರಲಿಲ್ಲ.

ಟೆಂಟ್ ನಲ್ಲೇ ವಾಸ, ಡಬ್ಬಿಗಳಲ್ಲಿ ಶೌಚ ಮಾಡಿ ವಿಲೇವಾರಿ ಮಾಡಬೇಕಾದ ಪರಿಸ್ಥಿತಿ ಇತ್ತು. ಆಹಾರದ ವಿಚಾರದಲ್ಲಿ ಕೊಟ್ಟಿದ್ದನ್ನು ತಿನ್ನಬೇಕಾಗಿದ್ದು. ಮಾಂಸ ಆಹಾರ ನೀಡುವ ನೆಪದಲ್ಲಿ ನೀರಿನ ಇಂಜೆಕ್ಷನ್ ನೀಡಿದ ಕೋಳಿ ಮಾಂಸ ನೀಡುತ್ತಿದ್ದರು, ಇಷ್ಟನ್ನು ಒಂದು ಟೆಂಟಿನವರೆಲ್ಲರೂ ಹಂಚಿಕೊಳ್ಳಬೇಕಿತ್ತು. ಹತ್ತಿಯ ಬಟ್ಟೆಯಿಂದ ತಯಾರಿಸಿದ ಸಮವಸ್ತ್ರ, ಅವುಗಳನ್ನು ಒಗೆದು ಹಾಕಿಕೊಳ್ಳುವ ಸರಿಯಾದ ವ್ಯವಸ್ತೆಗಳಿರುತ್ತಿರಲಿಲ್ಲ, ಇದೇ ಕಾರಣಕ್ಕೆ ಸೈನಿಕರ ಬಟ್ಟೆಗಳು ರಟ್ಟಿನಂತಾಗಿರುತ್ತಿತ್ತು ಎನ್ನುತ್ತಾರೆ ಮಾದಪ್ಪ.

(ಸಾಂದರ್ಭಿಕ ಚಿತ್ರ)

ಕಣ್ಣ ಮುಂದೆ ನಡೆದುಬಿಡುತ್ತಿತ್ತು ಭೀಕರತೆ:

ಗಡಿ ಭಾಗದಲ್ಲಿ ಯುದ್ದದ ಮುನ್ಸೂಚನೆಗಳಿದ್ದರೆ ಒಂದು ಭಾಗದಿಂದ ಮತ್ತೊಂದೆಡೆಗೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡು ಹೋಗುವುದು ಸಹಜ.ಹೀಗೆ ಅಸ್ಸಾಂ ಯುನಿಟ್ ನಿಂದ ಅರುಣಾಚಲ ಪ್ರದೇಶಕ್ಕೆ ಸೈನಿಕರು,ಆಹಾರ ಸಾಮಗ್ರಿಗಳು,ವೈದಕೀಯ ಉಪಕರಣಗಳನ್ನು ಹೊತ್ತು ಸಾಗುತ್ತಿದ್ದಂತೆ ವೈದಕೀಯ ವಾಹನ ಮುಂದೆ ಇಂಧನ ತುಂಬಿದ ಟ್ರಕ್ ಇದ್ದಕ್ಕಿದಂತೆ ಬ್ರೇಕ್ ವೈಫಲ್ಯಗೊಂಡು ಸುಮಾರು 200 ಅಡಿ ಇಳಿಜಾರಿನಲ್ಲಿ ನೋಡನೋಡುತ್ತಿದ್ದಂತೆ ಜಾರಿಕೊಂಡು ಹೋಯಿತು.

ಅದರಲ್ಲಿ ಚಾಲಕ ಸೇರಿದಂತೆ ಐದು ಜವಾನರಿದ್ದರು, ಅವರ ಅದೃಷ್ಟವೋ ಏನೋ ಒಂದು ಚಿಕ್ಕ ಗಿಡ ಟ್ರಕ್ ಅನ್ನು ತಡೆದು ನಿಲ್ಲಿಸಿತ್ತು,ಒಂದು ವೇಳೆ ಟ್ರಕ್ ನಿಲ್ಲದಿದ್ದರೆ ಭಾರೀ ಸ್ಪೋಟದೊಂದಿಗೆ ಅಷ್ಟೂ ಜನರು ಕಣ್ಣ ಮುಂದೆ ಸುಟೊಟು ಕರಕಲಾಗಿಬಿಡುತ್ತಿದ್ದರು. ತಕ್ಷಣ ಎಚ್ಚೆತ್ತುಕೊಂಡು ನಮ್ಮ ಯೋಧರು ಅವರನ್ನು ರಕ್ಷಿಸಿದರು.

ಸುಬೇದಾರ್ ಮಾದಪ್ಪ ಅವರು ಸೇವೆ‌ಸಲ್ಲಿಸಿದ ಸೇನೆಯ ವೈದ್ಯಕೀಯ ಸಂಸ್ಥೆಯ ಲೋಗೋ

ರೈಲ್ವೆ ಬುಕ್ಕಿಂಗ್ ಕನಸ್ಸಿನ ಮಾತು:

ಸೇನೆಯಿಂದ ರಜೆಗೆ ಊರಿಗೆ ಬರಬೇಕು ಎಂದರೆ ರೈಲಿನಲ್ಲೇ ಬರಬೇಕಾಗಿತ್ತು,ತುಂಬಿತುಳುಕ್ಕುತ್ತಿದ್ದ ರೈಲಿನಲ್ಲಿ ತಮ್ಮ ಟ್ರಂಕ್ ಹೊತ್ತು ಕೂರುವುದಾಗಲಿ ನಿಲ್ಲವುದಕ್ಕೂ ಸಾಧ್ಯವಾಗುತ್ತಿರಲ್ಲ. ಕೆಲವೊಂದು ಬಾರಿ ರೈಲ್ವೆ ನಿಲ್ದಾಣದಲ್ಲಿರುವ ಹಮಾಲಿಗಳಿಗೆ ಒಂದಿಷ್ಟ ಹಣ ಕೊಟ್ಟರೆ ನಮ್ಮಂತ ಜವಾನರಿಗೆ ಸ್ವಲ್ಪ ಜಾಗದ ವ್ಯವಸ್ಥೆ ಮಾಡಿಕೊಡುತ್ತಿದ್ದರು, ಇಲ್ಲವೇ ರೈಲಿನ ಶೌಚಾಲಯದಲ್ಲೇ ಕೂತು ಪ್ರಯಾಣ..!

ಇನ್ನು ರಜೆಗೆ ತೆರುವ ಸಂದರ್ಭ 200 ಹೆಚ್ಚುವರಿಯಾಗಿ ನೀಡುತ್ತಿದ್ದರು, ಈ ಹಣದಲ್ಲಿ ಮನೆಗೂ ನೀಡಿ ಅದರಲ್ಲಿ ಉಳಿಸಿದ ಹಣದಲ್ಲಿ ಮತ್ತೆ ಕ್ಯಾಂಪ್ ಸೇರುತ್ತಿದ್ದವು.

ಸುಬೇದಾರ್ ಮಾದಪ್ಪ ಅವರ ಪುತ್ರ ಮಿಥುನ್ ಕೂಡ ಸೇನೆಯ ಮೆಡಿಕಲ್ ಕೋರ್ ಅಲ್ಲಿ ಮೇಜರ್ ಆಗಿ ದೇಶ ಸೇವೆಯನ್ನೇ ಸಲ್ಲಿಸುತ್ತಿದ್ದಾರೆ.

ಸದ್ಯಕ್ಕೆ ಮಾದಪ್ಪರವರು ಕುಶಾಲನಗರದಲ್ಲಿ ಪತ್ನಿ ರಮಾವತಿ ಜೊತೆ ನೆಲೆಸಿದ್ದಾರೆ. ಇವರ ಒಬ್ಬ ಪುತ್ರ ಮಿಥುನ್ ಇಂಡಿಯನ್ ಮೆಡಿಕಲ್ ಕೋರ್ ನಲ್ಲಿ ಮೇಜರ್ ಆಗಿದ್ದಾರೆ ಮತ್ತೂಬ್ಬ ಪುತ್ರ ಪ್ರಸನ್ನ ಐಟಿ ಉದ್ಯೋಗಿಯಾಗಿದ್ದಾರೆ.

ಮತ್ತೊರ್ವ ಪುತ್ರ ಪ್ರಸನ್ನ ಅವರ ವಿವಾಹದ ಸಂದರ್ಭ ಸುಬೇದಾರ್ ಮಾದಪ್ಪ ಅವರು ಹಾಗು ಕುಟುಂಬ ಸದಸ್ಯರು

ಗಿರಿಧರ್ ಕೊಂಪುಳೀರಾ,
ಪ್ರಧಾನ ವರದಿಗಾರರು ಹಾಗು ಅಂಕಣಕಾರರು
error: Content is protected !!