fbpx

ಆಹಾರಕ್ಕಾಗಿ ಮನೆಯ ಬಾಗಿಲು ಬಡಿದ ಕಾಡಾನೆಗಳು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಮಂಚಳ್ಳಿ ಗ್ರಾಮದ ಸೋಮಯ್ಯ ಎಂಬುವವರ ಮನೆಗೆ ಅಪರೂಪದ ಇಬ್ಬರು ಅತಿಥಿಗಳು ಆಗಮಿಸಿ, ಆಹಾರಕ್ಕಾಗಿ ಮನೆಯ ಬಾಗಿಲು ಬಡಿದು ಆಹಾರ ಸಿಗದೆ ಬಂದದಾರಿಗೆ ಸುಂಕ ಇಲ್ಲ ಎನ್ನುವಂತೆ ವಾಪಸ್ಸಾಗಿರುವ ಘಟನೆ ನಡೆದಿದೆ.ಅಂದಾಗೆ ಹೀಗೆ ಬಂದಿರುವ ನೆಂಟರು ಯಾರಂದರೆ,ಎರಡು ಗಜರಾಜಗಳು.ಗಣೇಶ ಉತ್ಸವ ಹೊಸ್ತಿಲಲ್ಲಿ ಮನೆಯ ಸಮೀಪದಲ್ಲಿ ಹಲಸಿಹಣ್ಣು ತಿಂದು ಆಹಾರಕ್ಕಾಗಿ ಬಾಗಿಲು ಬಡೆಯುತ್ತಿತ್ತು ಎನ್ನಲಾಗಿದೆ.

ನಾಗರಹೊಳೆ ಅಂಚಿನಲ್ಲಿ ಇರುವ ಈ ಗ್ರಾಮಕ್ಕೆ ಕಾಡಾನೆಗಳು ಹಾಡಿಗಳಲ್ಲಿ ಉಪ್ಪು, ಬೆಲ್ಲದಂತಹಾ ಪದಾರ್ಥಗಳ ರುಚಿ ನೋಡಿದ್ದರೆ, ಮನೆಗಳಿಗೆ ಲಗ್ಗೆ ಇಡುತ್ತವೆ ಎನ್ನಲಾಗಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

error: Content is protected !!