fbpx

ಆಸ್ಪತ್ರೆ ಇಲ್ಲದೆ ಚಿಕಿತ್ಸೆಗಾಗಿ ಪರದಾಟ….

ಉಮೇಶ್ ಕುಮಾರ್, ಸಮಾಜ ಸೇವಕರು

ಒಂದು ಕಡೆ ಮಿತಿಮೀರಿ ಏರುತ್ತಿರುವ ಕೋರೋನಾ ಸೋಂಕು ಸೋಂಕಿತರ, ಶಂಕಿತರ ಸಂಖ್ಯೆ ….ಇನ್ನೊಂದು ಕಡೆ ಆಸ್ಪತ್ರೆ ಇಲ್ಲದೆ ಸಾಮಾನ್ಯ ಚಿಕಿತ್ಸೆ ದೊರೆಯದೆ ಕಂಗಾಲಾಗಿರುವ ಜನಸಾಮಾನ್ಯರು ……

ಹೌದು ಪ್ರಾರಂಭದಲ್ಲಿ ಜಿಲ್ಲೆಯಲ್ಲಿ ಒಂದೋ ಎರಡೋ ಇದ್ದ ಕೋರೋನಾ ಸೋಂಕು ಸೋಂಕಿತರ ಸಂಖ್ಯೆ ಇದೀಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಶತಕದ ಸಮೀಪದಲ್ಲಿದೆ. ನಿಯಂತ್ರಣ ಕಷ್ಟ ಸಾಧ್ಯವಾಗಿ ಗೋಚರಿಸುತ್ತಿದೆ,ಪರಿಸ್ಥಿತಿ ಬಿಗಡಾಯಿಸುತ್ತಿದೆ ಆರಂಭದಲ್ಲಿ ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆಯನ್ನು ಕೋರೋನಾ ಸೋಂಕು ಸೋಂಕಿತರ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಯಿತು. ಇದನ್ನು ಹೊರತಾಗಿ ಕೆಲವೊಂದು ಆರೋಗ್ಯ ಸಮಸ್ಯೆಗಳ ಕಾರಣದಿಂದ ಚಿಕಿತ್ಸೆಗಾಗಿ ಬರುವವರಿಗಾಗಿ ನಗರದ ಅಶ್ವಿನಿ ಆಸ್ಪತ್ರೆಯನ್ನು ಸರಕಾರಿ ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗಿತ್ತು. ಕೆಲವೊಂದು ನೂನ್ಯತೆ,ಸಮಸ್ಯೆಯನ್ನು ಹೊರತುಪಡಿಸಿ ಇದು ಎಲ್ಲರಿಗೂ ಅನುಕೂಲವಾಗಿತ್ತು ಕೊರಾನಾ ಹೊರತಾಗಿದ ಆರೋಗ್ಯ ಸಮಸ್ಯೆಗಳಿಗೆ ಎಲ್ಲರೂ ಈ (ಅಶ್ವಿನಿ ಆಸ್ಪತ್ರೆ )ಆಸ್ಪತ್ರೆಯನ್ನು ಅವಲಂಬಿಸಿ ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ ಇದೀಗ ಕೊಡಗಿನಲ್ಲಿ ಕೋರೋನಾ ಮಹಾಮಾರಿ ಆವರಿಸುತ್ತಿರುವ ಪರಿಯಿಂದಾಗಿ ಸೋಂಕಿತರ, ಶಂಕಿತರ ಚಿಕಿತ್ಸೆಗಾಗಿ ಜಿಲ್ಲಾಡಳಿತ ಸರಕಾರಿ ಆಸ್ಪತ್ರೆಯ೦ತೆ ಅಶ್ವಿನಿ ಆಸ್ಪತ್ರೆಯನ್ನು ಕೂಡ ಸುಪರ್ದಿಗೆ ತೆಗೆದುಕೊಂಡು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿ ಇನ್ನಿತರ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಪರ್ಯಾಯವಾಗಿ ಯಾವುದೇ ವ್ಯವಸ್ಥೆ ಮಾಡದಿರುವುದು ಸಮಸ್ಯೆಗೆ ಕಾರಣವಾಯಿತು.

ಮಳೆ ಚಳಿಯಿಂದಲೊ…. ವಾತಾವರಣದಲ್ಲಿನ ಏರುಪೇರಿನಿಂದಾಗಿಯೋ…. ಇನ್ನಿತರ ಕಾರಣಗಳಿಂದಲೊ…. ಆರೋಗ್ಯದಲ್ಲಿ ಸಮಸ್ಯೆಗಳಾದಾಗ ಸಾಮಾನ್ಯ ವರ್ಗದ ಜನರು ಆಸ್ಪತ್ರೆಗಳಿಗೆ ಅಳೆಯುವುದು ಸಹಜ ಇದೀಗ ಜಿಲ್ಲಾಡಳಿತ ಎರಡು ಆಸ್ಪತ್ರೆಗಳನ್ನು ಕೊವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿದ ಮೇಲೆ ಸಣ್ಣಪುಟ್ಟ ಸಮಸ್ಯೆಗಳಿಗೆ ಬರುವವರನ್ನು ವೈದ್ಯರುಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಖಾಸಗಿ ಚಿಕಿತ್ಸಾಲಯ , ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆ. ಆದರೆ ಇದು ಎಷ್ಟು ಸರಿ…..!ಕೆಳವರ್ಗದವರು, ಬಡವರು, ಸಾಮಾನ್ಯ ವರ್ಗದವರು ಇಂಥ ಸಮಯದಲ್ಲಿ ಖಾಸಗಿ ಚಿಕಿತ್ಸಾಲಯ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಷ್ಟು ಶಕ್ತರಾಗಿದ್ದಾರೆಯೇ…? ಹೇಳಿ ಕೇಳಿ ಖಾಸಗಿ ಚಿಕಿತ್ಸಾಲಯ ಅಥವಾ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಗಳು ದುಬಾರಿಯಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ ಹೀಗಿರುವಾಗ ಇಂಥ ಬಡವರು ಹೋಗುವುದಾದರೂ ಎಲ್ಲಿಗೆ ಹೀಗೊಂದು ಜಿಜ್ಞಾಸೆ ಉಂಟಾಗಿದೆ. ಇವರ ಪರಿಸ್ಥಿತಿ ಕೇಳುವವರು ಯಾರು…?ಸಮಸ್ಯೆ ದೊಡ್ಡದಲ್ಲ ಪರಿಹಾರ ಇದ್ದೇ ಇದೆ ಈ ಕೂಡಲೇ ಜಿಲ್ಲಾಡಳಿತ ಜಿಲ್ಲೆಯಲ್ಲಿರುವ ಹಾಗೂ ನಗರದಲ್ಲಿರುವ ಖಾಸಗಿ ಚಿಕಿತ್ಸಾಲಯ ಹಾಗೂ ಆಸ್ಪತ್ರೆಗಳನ್ನು ಸುಪರ್ದಿಗೆ ತೆಗೆದುಕೊಂಡು ಕೋರೊನಾತ್ತೆರಾ ಆರೋಗ್ಯ ಸಮಸ್ಯೆಗಳಿಗಾಗಿ ಬರುವವರ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಯನ್ನಾಗಿ ಮಾರ್ಪಡಿಸಬಹುದಲ್ಲವೆ….! ಆದಾಯದಲ್ಲಿನ ಏರುಪೇರಿನಿಂದಾಗಿ ಸಂಕಷ್ಟದಲ್ಲಿರುವ ಬಡವರು ಕೆಳ ವರ್ಗದವರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳನ್ನು ಆಶ್ರಯಿಸುವುದು ಕಷ್ಟ ಸಾಧ್ಯವಾಗಿರುವುದರಿಂದ ಜಿಲ್ಲಾಡಳಿತ ಆದಷ್ಟು ಬೇಗ ಎಚ್ಚೆತ್ತುಕೊಂಡು ಇಂಥ ಖಾಸಗಿ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳನ್ನು ಕೋರೋನಾ ಮಹಾಮಾರಿ ನಿಯಂತ್ರಣಕ್ಕೆ ಬರುವವರಿಗೂ ಸರಕಾರಿ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಚಿಕಿತ್ಸೆಗೆ ಅವಕಾಶ ಕೊಡಬಹುದಲ್ಲವೇ…! ಈ ಕೂಡಲೇ ಮಾನ್ಯ ಜಿಲ್ಲಾಧಿಕಾರಿಯವರು ಇದರ ಬಗ್ಗೆ ಗಮನ ಹರಿಸಿ ಜನಸಾಮಾನ್ಯರ ಕೂಗಿಗೆ ಸ್ಪಂದಿಸಲಿ ಎಂಬುದು ಜನತೆಯ ಕೋರಿಕೆಯಾಗಿದೆ.

ಉಮೇಶ್ ಕುಮಾರ್
error: Content is protected !!