ಆಸ್ಪತ್ರೆ ಆಯ್ತು ಈಗ ಆರೋಗ್ಯಧಿಕಾರಿ ಕಚೇರಿಯಲ್ಲಿ ಕಳ್ಳತನ

ಆರೋಪಿ ಸುಮಂತ್(19)

ಕಳ್ಳತನ ಪ್ರಕರಣದಿಂದ ಜೈಲುವಾಸಿಯಾಗಿದ್ದ ಕಳ್ಳನೊಬ್ಬ ಹೊರ ಬರುತ್ತಿದ್ದಂತೆ ಮತ್ತೆ ಕೈಚಳಕ ಪ್ರದರ್ಶಿಸಿ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.ವಿಶೇಷ ಇಂದರೆ ಇಲ್ಲಿ ಕಳ್ಳತನ ನಡೆದದ್ದು ಮತ್ತೆ ಆರೋಗ್ಯಾಧಿಕಾರಿಗೆ ಸೇರಿದ ಲ್ಯಾಪ್ಟಾಪ್.ಮಡಿಕೇರಿ ನಗರದ ಆರೋಗ್ಯಧಿಕಾರಿ ಕಚೇರಿ ಸಂಕಿರ್ಣದೀಂದ ಇಲಾಖೆಗೆ ಸೇರಿದ 40 ಸಾವಿರ ಮೌಲ್ಯದ ಲ್ಯಾಪ್ ಟಾಪ್ ಅನ್ನು ಚೈನ್ ಗೇಟ್ ನಿವಾಸಿ ಸುಮಂತ್ (19) ಎಂಬಾತ ಕಳ್ಳತನ ಮಾಡಿರುವ ಬಗ್ಗೆ ನಗರ ಪೋಲಿಸರು ಕಲೆ ಹಾಕಿ ಲ್ಯಾಪ್ಟಾಪ್ ವಶಕ್ಕೆ ಪಡೆದು,ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.

ಅಂಗಡಿಯೊಂದರ ಕಳವು ಪ್ರಕರಣದಲ್ಲಿ ಸೆರೆಯಾಗಿ ಜೈಲು ಸೇರಿದ್ದು, ಕಳೆದ 2 ದಿನಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯ ವಿರುದ್ದ ಮಡಿಕೇರಿ, ಕುಶಾಲನಗರ ಪೊಲೀಸ್ ಠಾಣೆಗಳಲ್ಲಿ ವಿವಿಧ ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ:

ಮಂಗಳವಾರ ಸಂಜೆ 4 ಗಂಟೆಯ ಸಮಯದಲ್ಲಿ ಮಡಿಕೇರಿಯಲ್ಲಿನ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ಚಾಜ್೯ಗೆ ಹಾಕಿದ್ದ ಸರಕಾರಿ ಲ್ಯಾಪ್ಟಾಪ್ ನಾಪತ್ತೆಯಾಗಿತ್ತು. ಈ ಸರಕಾರಿ ಲ್ಯಾಪ್ಟಾಪ್ನಲ್ಲಿ ಕೋವಿಡ್ ಸಂಬಂಧಿತ ಡಾಟಾಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳ ಮಾಸಿಕ ವೇತನ ಮಾಹಿತಿ ಸಹಿತ ಎಲ್ಲಾ ಡಾಟಾಗಳು ಇದ್ದವು. ಈ ಲ್ಯಾಪ್ಟಾಪ್ನಲ್ಲಿ ಅಮೂಲ್ಯ ದಾಖಲಾತಿಗಳು ಇದ್ದ ಹಿನ್ನೆಲೆಯಲ್ಲಿ ಕಚೇರಿ ಸಿಬ್ಬಂದಿಗಳು ಈ ಕುರಿತು ಎಲ್ಲೆಡೆ ಹುಡುಕಾಡಿದ್ದರೂ ಕೂಡ ಲ್ಯಾಪ್ ಟಾಪ್ ಪತ್ತೆಯಾಗಿರಲಿಲ್ಲ.

ವೈದಾಧಿಕಾರಿ ಡಾ. ಆನಂದ್ ನಗರ ಪೊಲೀಸ್ ಠಾಣೆಗೆ ಲ್ಯಾಪ್ ಟಾಪ್ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ನಗರ ಪೊಲೀಸರು ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಸಂಕೀರ್ಣಕ್ಕೆ ತೆರಳಿ ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಿದ್ದರು. ಬಳಿಕ ಚೈನ್ಗೇಟ್ ನಿವಾಸಿ ಸುಮಂತ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ಸಂದರ್ಭ ಕಳವು ಪ್ರಕರಣ ಪತ್ತೆಯಾಗಿದೆ. ಆತನ ಬಳಿಯಿದ್ದ ಸರಕಾರಿ ಲ್ಯಾಪ್ ಟಾಪ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

error: Content is protected !!