ಆಸ್ಪತ್ರೆಗೆ ಹೊರಟವ ಮಸಣ ಸೇರಿದ ಯುವಕ: ನಡುರಸ್ತೆಯಲ್ಲಿ ಯುವಕ ಸಾವು


ಕೊಡಗು:ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೊಬ್ಬ ನಡು ರಸ್ತೆಯಲ್ಲಿ ಮೃತಪಟ್ಟಿರುವ ಘಟನೆ ಬಜೆಗುಂಡಿಯಲ್ಲಿ ನಡೆದಿದೆ.ಶೀತ ಕೆಮ್ಮುವಿನಿಂದ ಬಳಲುತ್ತಿದ್ದ ಮನು ಎಂಬಾತ ಮೃತ ಯುವಕನಾಗಿದ್ದು, ದಿನದ ಹಿಂದೆಯಷ್ಟೇ ಆಶಾ ಕಾರ್ಯಕರ್ತರ ಭೇಟಿ ವೇಳೆ ಸಲಹೆಯಂತೆ ಇಂದು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಆಸ್ಪತ್ರೆಗೆ ತೆರಳಲು ನಿರ್ಧರಿಸಿ ಸತತ ಮೂರು ಗಂಟೆಗಳ ಕಾಲ ಯಾವುದೇ ವಾಹನ ಸಿಗದೆ ಬಳಲಿ ನಡೆದುಕೊಂಡೇ ತೆರಳುತ್ತಿದ್ದ ವೇಳೆ ಕುಸಿದು ಬಿದ್ದಿದ್ದು,ಬಳಿಕ ಸೊಥಳೀಯರು ಆಂಬುಲೆನ್ಸ್ ಕರೆ ಮಾಡಿ ಮಡಿಕೇರಿಗೆ ಸಾಗಿಸುವ ಮದ್ಯೆ ಮೃತಪಟ್ಟಿದ್ದಾನೆ. ಸಾವಿಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

error: Content is protected !!