ಆಶ್ಲೇಷ ಮಳೆಯ ಆರ್ಭಟ: ಮನೆ ಕುಸಿದು ಹಾನಿ

ಚೆಟ್ಟಳ್ಳಿ : ನಿನ್ನೆ ಸುರಿದ ಅಪಾರ ಮಳೆಯಿಂದ ಚೇರಳ ಶ್ರೀಮಂಗಲ ಗ್ರಾಮದ ಎಂ. ಪ್ರೇಮ ಜೋಯಪ್ಪ ಎಂಬವರ ಅಡುಗೆ ಮನೆ ಕುಸಿದು ಬಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಮನೆಯ ಗೋಡೆ ಕುಸಿದ ಪರಿಣಾಮ ಮನೆಯಲ್ಲಿದ್ದ ಸಾಮಗ್ರಿಗಳೆಲ್ಲ ಮಣ್ಣುಪಾಲಾಗಿದೆ ಎನ್ನಲಾಗಿದ್ದು ಮನೆಯು ವಾಸಕ್ಕೆ ಯೋಗ್ಯವಿಲ್ಲದಾಗಿದೆ ಎಂದು ತಿಳಿಸಿದ್ದಾರೆ.