ಆರೋಗ್ಯಕ್ಕೆ ಒಳಿತು ಕಾಮಕಸ್ತೂರಿ

ಶರೀರದಲ್ಲಿ ಉಷ್ಣತೆ ಹೆಚ್ಚಾದಾಗ ನಾವು ಎಷ್ಟೋ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಅಂತೂ ಈ ಸಮಸ್ಯೆ ತುಂಬಾ ಹೆಚ್ಚಾಗಿಯೇ ಇರುತ್ತದೆ. ಆದರೆ ನಮ್ಮ ಶರೀರದಲ್ಲಿ ಉಷ್ಣತೆ ಹೆಚ್ಚಾಗಲು ಮುಖ್ಯ ಕಾರಣ ಏನು ಅಂದರೆ ನಾವು ಅತಿಯಾಗಿ ಸೇವಿಸುವ ಮಸಾಲೆ ಪದಾರ್ಥಗಳು, ಕಡಿಮೆ ನೀರು ಕುಡಿಯುವುದು, ಹೆಚ್ಚಿನ ಸಮಯ ಕುರ್ಚಿಯ ಮೇಲೆ ಕುಳಿತು ಕೆಲಸ ಮಾಡುವುದರಿಂದ ಉಷ್ಣತೆ ಹೆಚ್ಚಾಗುತ್ತದೆ. ನಮಗೆ ಉಷ್ಣತೆ ಹೆಚ್ಚಾಗುತ್ತಿದ್ದಂತೆ ಬರುವ ಸಮಸ್ಯೆಗಳು ಒಂದೆರಡಲ್ಲ. ಮುಖದಲ್ಲಿ ಮೊಡವೆಗಳು ಹೆಚ್ಚು ಆಗೋದು, ಅಲ್ಸರ್ ಅಂತಹ ಸಮಸ್ಯೆಗಳನ್ನು ಹೆಚ್ಚಾಗಿ ಕಾಣುತ್ತೇವೇ. ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು, ಉರಿ ಕಂಡು ಬರುತ್ತದೆ. ಹಾಗಾಗಿ ಈ ಲೇಖನದ ಮೂಲಕ ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳುವಬಗ್ಗೆ ತಿಳಿದುಕೊಳ್ಳೋಣ.

ನಾವು ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಕೇವಲ ನಮ್ಮ ಮನೆಯಲ್ಲಿರುವಂತಹ ಪದಾರ್ಥಗಳನ್ನು ಬಳಸಿಯೇ ಕಡಿಮೆ ಮಾಡಿಕೊಳ್ಳಬಹುದು.

ಹೇಗೆ ಅಂತ ನೋಡೋಣ. ಮೊದಲು ಒಂದು ಪಾತ್ರೆಗೆ ಸಬ್ಜಾ ಬೀಜ ಅಥವಾ ಕಾಮಕಸ್ತೂರಿ ಬೀಜ ಒಂದು ಚಮಚ ತೆಗೆದುಕೊಂಡು ಅದಕ್ಕೆ 2 ಲೋಟ ನೀರು ಹಾಕಿ ಅರ್ಧ ಗಂಟೆ ನೆನೆಯಲು ಬಿಡಬೇಕು. ಅಥವಾ ರಾತ್ರಿಯೇ ನೆನೆಹಾಕಿ ಇಡಬೇಕು. ನಂತರ ಇದಕ್ಕೆ ರುಚಿಗೆ ಬೇಕಾದಷ್ಟು ಕಲ್ಲುಸಕ್ಕರೆಯನ್ನು ಬಳಸಬೇಕು. ಆದರೆ ಯಾವುದೇ ಕಾರಣಕ್ಕೂ ದಿನ ಬಳಕೆಯ ಸಕ್ಕರೆ ಅಥವಾ ಬೆಲ್ಲ ಬೇಡ. ನಂತರ ಇದಕ್ಕೆ ಕಲ್ಲುಸಕ್ಕರೆ ಹಾಕಿದ ಮೇಲೆ ಸ್ವಲ್ಪ ಎಲಕ್ಕಿ ಪುಡಿ ಹಾಗೂ ಅರ್ಧ ಭಾಗ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಮಿಕ್ಸ್ ಮಾಡಬೇಕು. ಆದರೆ ಶುಗರ್ ಇರುವವರು ಮಾತ್ರ ಕಲ್ಲುಸಕ್ಕರೆಯನ್ನು ಬಿಟ್ಟು ಬಳಸಬಹುದು.

ಸಬ್ಜಾ ಬೀಜ ಅಥವಾ ಕಾಮಕಸ್ತೂರಿ ಬೀಜದಲ್ಲಿ ವಿಟಮಿನ್ ಎ ಹೆಚ್ಚಾಗಿ ಇರುತ್ತದೆ. ಇದು ನಮ್ಮ ದೇಹದ ತೂಕ ಇಳಿಕೆಗೂ ಸಹ ಸಹಾಯಕಾರಿ ಆಗುವುದು. ಇದರ ಜೊತೆಗೆ ಅಧಿಕ ಉಷ್ಣತೆಯಿಂದ ಮೂಗಿನಲ್ಲಿ ರಕ್ತ ಬರುವುದು, ಉರಿ ಮೂತ್ರದಂತಹ ಸಮಸ್ಯೆಗಳನ್ನು ಸಹ ನಿವಾರಣೆ ಮಾಡಿಕೊಳ್ಳಬಹುದು. ಈ ರೀತಿ ಪಾನೀಯ ಮಾಡಿಟ್ಟುಕೊಂಡು ಯಾರು ಬೇಕಿದ್ದರೂ ಯಾವಾಗ ಬೇಕಿದ್ದರೂ ಸೇವಿಸಬಹುದು.

error: Content is protected !!