fbpx

ಆರೋಗ್ಯಕ್ಕೆ ಉಪಕಾರಿ ಬೆಂಡೆಕಾಯಿ

ಎಲ್ಲರು ಎಲ್ಲಾ ತರಕಾರಿಯನ್ನು ಇಷ್ಟಪಟ್ಟು ತಿನ್ನಲ್ಲ. ಅದರಲ್ಲಿ ಬೆಂಡೆ ಕೂಡ ಒಂದು. ಅದರಲ್ಲಿನ ಲೋಳೆ ಲೋಳೆಯಿಂದ ಅನೇಕರು ಅದನ್ನ ದ್ವೇಷಿಸಿದ್ರೆ ಇನ್ನು ಹಲವರು ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದ್ರೆ ಈಗ ನಾವೇಳುವ ಬೆಂಡೆ ಉಪಯೋಗ ಕೇಳಿದ್ರೆ ಬೇಡ ಎನ್ನುವವರು ತಿಂತೀರಾ.

ಬೆಂಡೆಕಾಯಿ ಸಾಕಷ್ಟು ಔಷಧಿಯ ಗುಣಗಳನ್ನು ಹೊಂದಿದೆ. 30 ಕೆಲೊರಿಗಳಿರುವ ಪೌಷ್ಠಿಕ ತರಕಾರಿಯಾಗಿರುವ ಬೆಂಡೆಕಾಯಿಯಲ್ಲಿ 75 ಮಿಲಿಗ್ರಾಂ ಸಿ ಜೀವಸತ್ವವಿದೆ. ಒಂದು ತುಂಡು ಬೆಂಡೆ ತಿಂದರೆ ಒಂದು ಕಪ್ ಟೊಮೆಟೊ ದಲ್ಲಿರುವಷ್ಟು ಸಿ ಜೀವಸತ್ವ ಸಿಗುತ್ತದೆ. ಶೇ. 7.6ರಷ್ಟು ಕಾರ್ಬೋಹೈಡ್ರೇಟ್ಸ್, ಶೇ. 3.2 ನಾರು, ಶೇ. 2 ಪ್ರೊಟೀನ್, 75 ಮಿಲಿಗ್ರಾಂ ಸುಣ್ಣ, ಮೆಗ್ನೀಶಿಯಂ, ಫೋಲೆಟ್‌ಗಳಿರುವ ಅದರಲ್ಲಿ 57 ಮಿಲಿಗ್ರಾಂ ಪ್ರಮಾಣದ ಎ ಜೀವಸತ್ವವೂ ಇದೆ.

ಯಾರಿಗೆಲ್ಲಾ ಉಪಯೋಗ..?

* ಡಯಾಬಿಟಿಸ್‌ ಇರುವವರಿಗೆ ಬೆಂಡೆಕಾಯಿ ಸೇವನೆಯು ಉತ್ತಮ ಮದ್ದಾಗಿದೆ.

* ಬೆಂಡೆಕಾಯಿಯನ್ನು ಕ್ರಮವಾಗಿ ಆಹಾರದಲ್ಲಿ ಬಳಸಿದರೆ ದೇಹಕ್ಕೆ ತಂಪು, ಹೊಟ್ಟೆಯ ಉರಿ, ಗುದದ್ವಾರದ ಉರಿ ಶಾಂತವಾಗುತ್ತದೆ.

* ಕಿಡ್ನಿ ಆರೋಗ್ಯಕ್ಕೂ ತುಂಬಾನೇ ಉತ್ತಮ ಔಷಧವಾಗಿದೆ.

* ಕರುಳಿನಲ್ಲಿ ಆಹಾರ ತಕ್ಷಣ ಜೀರ್ಣವಾಗಿ ಮಲಬದ್ಧತೆ ನಿವಾರಿಸಲು ಬೆಂಡೆಕಾಯಿ ಸಹಕಾರಿ.

* ಬೆಂಡೆಕಾಯಿಯನ್ನು ಕತ್ತರಿಸಿ ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಹತ್ತಿ ಬಟ್ಟೆಯ ಸಹಾಯದಿಂದ ಆ ನೀರನ್ನು ಮುಖಕ್ಕೆ ಹಚ್ಚಿಕೊಂಡು, ಅದು ಒಣಗಿದ ನಂತರ ಮುಖವನ್ನು ತೊಳೆಯಿರಿ. ಇದರಿಂದ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.

* ದೃಷ್ಟಿದೋಷ ನಿವಾರಿಸುವ ಎ ಜೀವಸತ್ವ ಬೆಂಡೆಯಲ್ಲಿದೆ.

* ಬೆಂಡೆಕಾಯಿ ನಿಮ್ಮ ದೇಹದಲ್ಲಿನ ಇಮ್ಯುನಿಟಿ ಪವರ್ ಹೆಚ್ಚು ಮಾಡುತ್ತದೆ.

ಬರೀ ದೇಹದ ಆರೋಗ್ಯ ಅಲ್ಲ, ಮುಖದ ಸೌಂದರ್ಯ, ಇಮ್ಯುನಿಟಿ ಬೂಸ್ಟ್ ಎಲ್ಲಾ ಶಕ್ತಿ ಒಂದರಲ್ಲೆ ಅಡಗಿರುವಾಗ ಚಿಂತೆ ಕಡಿಮೆ ಅಲ್ವಾ..ಹಾಗಾದ್ರೆ ಇನ್ಮುಂದೆ ಬೆಂಡೆನಾ ಇಷ್ಟ ಪಟ್ಟು ತಿನ್ನಿ.

error: Content is protected !!