ಆಮೆವೇಗದಲ್ಲಿ ಸಾಗುತ್ತಿದೆ ಸೇತುವೆ ಕಾಮಗಾರಿ

ಕಳೆದ ಐದು ವರ್ಷಗಳಿಂದ ಒಂದಲ್ಲಾ ಒಂದು ಕಾರಣಕ್ಕೆ ನೆನೆಗುದಿಗೆ ಬಿದ್ದಿರುವ ಭಾಗಮಂಡಲ -ತಲಕಾವೇರಿ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ.


ಕೋವಿಡ್ ನಡುವೆ ಕಾರ್ಮಿಕರ ಕೊರತೆಯಿಂದ ತಡವಾಗಿಯಾದರೂ ಕಾಮಗಾರಿ ಆರಂಭವಾಗಿದ್ದರೂ ಇದೀಗ ನಿಧಾನಗತಿಯಲ್ಲಿ ನಡೆಯುತ್ತಿರುವ ಕಾರಣ, ಸೇತುವೆ ನಿರ್ಮಾಣದ ವಸ್ತುಗಳು ಮುಖ್ಯ ರಸ್ತೆಯಲ್ಲೇ ಬಿದ್ದಿದ್ದು ಸ್ಥಳೀಯರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರಿಗೂ ಇದರಿಂದ ಸಮಸ್ಯೆಯಾಗುತ್ತಿದ್ದು ಅವೈಜ್ಞಾನಿಕ ಕಾಮಗಾರಿ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.