ಆಮೆಗತಿ ಭಾಗಮಂಡಲ ಮೇಲ್ಸೇತುವೆ ಕಾಮಗಾರಿ: ಎಂಜಿನಿಯರ್ ವಿರುದ್ಧ ಸ್ಥಳೀಯರ ಆಕ್ರೋಶ

ಕೊಡಗು: ಕೇವಲ ಒಂದು ವರ್ಷದಲ್ಲಿ ಪೂರ್ಣಗೊಳ್ಳಬೇಕಿದ್ದ ಭಗಂಡೇಶ್ವರ ದೇವಾಲಯದ ಎದುರಿನ ಮೇಲಾಸೇತುವೆ ಕಾಮಗಾರಿ ಮೂರು ವರ್ಷ ಕಳೆಯುತ್ತಾ ಬಂದರೂ ಕೇವಲ ಕಂಬಗಳ ಕಾಮಗಾರಿ ಬಳಿಕ ಸ್ಥಗಿತಗೊಂಡಿರುವುದಲ್ಲದೆ, ಇಕ್ಕಟ್ಟಾದ ರಸ್ತೆ,ಅಲ್ಲಿ ಇಲ್ಲಿ ಬಿದ್ದಿರುವ ಕಾಮಗಾರಿಗೆ ಬಳಸುವ ವಸ್ತುಗಳಿಂದ ದಿನನಿತ್ಯ ಕಿರಿಕಿರಿ ಅನುಭವಿಸುತ್ತಿದ್ದ ಸ್ಥಳೀಯರು ಎಂಜಿನಿಯರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಆರಂಭದಲ್ಲಿ ಸಂಪೂರ್ಣ ಹಣ ಬಿಡುಗಡೆಯಾಗಿಲ್ಲ ಎಂದು ಸಬೂಬು ಹೇಳಿ ಸ್ಥಗಿತಗೊಂಡ ಕಾಮಗಾರಿ,ಬಳಿಕ ಮಳೆ,ಗುಡ್ಡ ಕುಸಿದ,ಪ್ರವಾಹದ ಸಮಸ್ಯೆ ಜೊತೆ ಕೊರೊನಾದಿಂದ ಕಾರ್ಮಿಕರು ವಲಸೆ ಹೋಗಿದ್ದ ಪರಿಣಾಮ ನೆನೆಗುದಿಗೆ ಬಿದ್ದ ಪರಿಣಾಮ ಜನಾಕ್ರೋಶಕ್ಕೆ ಕಾರಣವಾಯಿತು.ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಕೆ.ಜಿ ಬೋಪಯ್ಯ ಎಂಜಿನಿಯರ್ ನನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿ ತ್ವರಿತಗತಿಯಲ್ಲಿ ನಡೆಸಬೇಕು ಎಂದರು,ಇನ್ನೇನು ಜೂನ್ ಆರಂಭದಲ್ಲಿ ಮಳೆಗಾಲ ಶುರುವಾದಲ್ಲಿ ಮುಂದಿನ ಅಕ್ಟೋಬರ್ ವರೆಗೆ ಮತ್ತೆ ವಿಳಂಬವಾಗುವ ಸಾಧ್ಯೆತೆಗಳಿದೆ.

error: Content is protected !!