fbpx

ಆನ್ ಲೈನ್ Web seriesಗಳಿಗೆ ಪ್ರಯೋಗವಾಗದಿದ್ದರೆ ಕತ್ತರಿ, ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಖಾತ್ರಿ!

ಹಿಂದಿನ ಕಾಲದಲ್ಲಿ ಸಿನಿಮಾ ಎಂಬುದು ಬಹು ದೊಡ್ಡ ಮಾಧ್ಯಮವಾಗಿತ್ತು. ಅದಕ್ಕೆ ಪರ್ಯಾಯವಾಗಿ ಸರಿಸಾಟಿಯಾಗುವ ಯಾವ ಸಮೂಹ ಮಾಧ್ಯಮಗಳೂ ಇರಲಿಲ್ಲ. ಅವು ಮನೋರಂಜನೆ ನೀಡುವುದು ಮಾತ್ರವಲ್ಲ, ಮಡಿವಂತಿಕೆಯ ಜೊತೆಗೆ ಸಮಾಜದ ಸ್ವಾಸ್ಥ್ಯಕ್ಕೆ ಉತ್ತಮ ಸಂದೇಶವನ್ನು ನೀಡಿ, ಜನರಲ್ಲಿನ ಹಲವಾರು ಬದಲಾವಣೆಗೂ ಪಾತ್ರವಾಗುತ್ತಿತ್ತು. ವರನಟ, ನಟಸಾರ್ವಭೌಮ ಡಾ. ರಾಜ್ ಕುಮಾರ್ ನಟನೆಯ ಬಂಗಾರದ ಮನುಷ್ಯ ಸಿನಿಮಾ ಪಟ್ಟಣಗಳಿಗೆ ಸಾಗಿ ಆಧುನಿಕರಣದ ಭರಾಟೆಗೆ ಯುವ ಜನರು ಸಿಲುಕುತ್ತಿರುವಾಗ ಅವರನ್ನೆಲ್ಲಾ ಹಳ್ಳಿಯಲ್ಲಿ ವ್ಯವಸಾಯ ಮಾಡುವಂತೆ ಪ್ರೇರೇಪಿಸಿತ್ತು. ದೊಡ್ಡ ಸಕಾರಾತ್ಮಕ ಪರಿಣಾಮವನ್ನೇ ಅದು ಹಾಗೆ ತಂದಿತ್ತು. ಆದರೆ ಇತ್ತೀಚೆಗೆ ಬರುವ ಕೆಲ ಸಿನಿಮಾಗಳು ಹಾಗು ಚಲನಚಿತ್ರಗಳ ಪರ್ಯಾಯದಂತೆ ಹುಟ್ಟಿಕೊಂಡಿರುವ ವೆಬ್ ಸಿರೀಸ್ ಗಳು ಸಾಮಾಜಿಕ ಕಳಕಳಿ, ಜವಾಬ್ದಾರಿಗಳನ್ನೇ ಮರೆತು ಕಥೆ ಸಂಭಾಷಣೆಗಳನ್ನು ಜನರೆದುರು ಪ್ರದರ್ಶಿಸರಾಸಲೀಲೆಗಳಕೊರೋನಾ ಸೊಂಕಿನಿಂದಾಗಿ ಈಗಂತೂ ಸಿನಿಮಾ ಥಿಯೇಟರ್ ಗಳು ತೆರೆಯದೆಯೇ ಸಿನಿಮಾಗಳು ತೆರೆ ಕಾಣುತ್ತಿಲ್ಲ. ಈ ಸಿನಿ ಲೋಕದ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಆನ್ ಲೈನ್ ಒಟಿಟಿ ಪ್ಲಾಟ್ ಫಾಮ್ ನತ್ತ ಮುಖ ಮಾಡಿದ್ದಾರೆ. ಒಟಿಟಿ ಎಂದರೆ ಆಂಗ್ಲ ಭಾಷೆಯಲ್ಲಿ (Over the top media services) ಎಂದು ಅರ್ಥ.‌ಇದು ಭಾರತದಲ್ಲಿ ಕಳೆದ ಐದು ವರ್ಷಗಳಿಂದ ಸದ್ದು ಮಾಡುತ್ತಿದ್ದು, ಬೃಹದಾಕಾರದಲ್ಲಿ ಬೆಳೆದಿದೆ. ಜನರೂ ಕೂಡ ಇದರತ್ತ ಹೆಚ್ಚಿನ ಒಲವು ತೋರುತ್ತಿದ್ದು, ಮನೋರಂಜನೆಯ ಮಹಾಪೂರವೇ ಇದರಿಂದ ಅವರಿಗೆ ದೊರೆಯುತ್ತಿದೆ. ಈಗ ಪ್ರಸ್ತುತ ಭಾರತದಲ್ಲಿ 40ರಷ್ಟು ಒಟಿಟಿ ಮಾಧ್ಯಮ ಸೇವೆಗಳ ಸಂಸ್ಥೆ ಇದ್ದು, ಜನ ಅವುಗಳಲ್ಲಿನ ವಿಷಯಗಳಿಗೆ ಅತಿ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

Netflix, Viu, Disney Hotstar, Hungama play, Voot, Jio Cinema, Ullu App, Sun Nxt, Jio Cinema, Amazon Prime Video, Eros Now ಹಾಗು ಇನ್ನೂ ಹತ್ತು ಹಲವು ಒಟಿಟಿ platformಗಳು ಮನೋರಂಜನೆಗೆಂದೇ ಇವೆ. ಭಾರತದಲ್ಲಿ ಒಟಿಟಿ ಬೆಳೆದಿದ್ದು 5 ವರ್ಷದಿಂದಾಗಿದ್ದು, ಜನ ಇದನ್ನು ಇಷ್ಟ ಪಡಲು ಮುಖ್ಯ ಕಾರಣ ಇಲ್ಲಿ ತಯಾರಾಗುವ ವೆಬ್ ಸಿರಿಸ್, ಸಿನಿಮಾಗಳಿಗೆ ಯಾವುದೇ ರೀತಿ ನಿಯಂತ್ರಣ ಹಾಗು ನಿಬಂಧನೆಗಳು ಇಲ್ಲದಿರುವುದೇ ಆಗಿದೆ. ಯಾವುದೇ ಕತ್ತರಿ ಪ್ರಯೋಗಗಳು ಆಗುವುದಿಲ್ಲವಾದ್ದರಿಂದ ಕಾಮಕೇಳಿ ದೃಶ್ಯಗಳು, ತಣ್ಣನೆಯ ಕ್ರೌರ್ಯದ ಭೀಭತ್ಸ್ಯ ದೃಶ್ಯಗಳು ಹಾಗಾಗೆ ಪ್ರದರ್ಶಿತಗೊಂಡು ಅಡ್ಡ ಪರಿಣಾಮವನ್ನು ಯುವ ಜನರ‌ ಮೇಲೆ ಬೀರುತ್ತಿವೆ. ಧಾರ್ಮಿಕ ಸೂಕ್ಷ್ಮ ಭಾವನೆಗಳಿಗೆ ಧಕ್ಕೆಯಾಗಿ ವಿವಾದ ಎಬ್ಬಿಸುವ ಹಲವಷ್ಟು ದೃಶ್ಯಗಳನ್ನು ಇವು ಎಡರು ತೊಡರು ಇಲ್ಲದೆ ಪ್ರದರ್ಶಿಸುತ್ತಿವೆ.

ಕೆಲವು ಅತಿ ವಿವಾದಾತ್ಮಕ ಒಟಿಟಿ ವೆಬ್ ಸಿರೀಸ್ ಗಳ ಕುರಿತು ಬೆಳಕು ಚೆಲ್ಲುವುದಾದರೆ:

ವೈಲ್ಡ್ ವೈಲ್ಡ್ ಕಂಟ್ರಿ

ಇದು ಆರು ಎಪಿಸೋಡುಗಳಿದ್ದ ವೆಬ್ ಸಿರೀಸ್ ಆಗಿತ್ತು. ದೈವ ಸಂಭೂತನೆಂದು ತನಗೆ‌ ತಾನೆ ಕರೆದುಕೊಳ್ಳುತ್ತಿದ್ದ ಸ್ವಯಂ ಘೋಷಿತ ದೇವಮಾನವನಾಗಿದ್ದ ಓಶೋ ಕುರಿತು ಇದ್ದ ಈ ವೆಬ್ ಸಿರೀಸ್ ಅವನು ಕಟ್ಟಿದ್ದ ರಜನೀಶಪುರಂ, ಅಲ್ಲಿನ ಕಾಮಕಾಂಡ, ರಾಸಲೀಲೆಗಳ ಹಾಗು ಸ್ಥಳೀಯರಿಂದ ಅದು ಯು.ಎಸ್.ಎ ಅಲ್ಲಿ ಎದುರಿಸಿದ ವಿರೋಧಗಳ ಕುರಿತು ಬೆಳಕು ಚೆಲ್ಲಿ ವಿವಾದಗಳನ್ನು ಭಾರೀ ಮಟ್ಟದಲ್ಲಿ ಸೃಷ್ಟಿಸಿತ್ತು. ಅದರೊಂದಿಗೆ ಕೆಲ ದೃಶ್ಯಗಳನ್ನು ಅನುಮತಿ ಇಲ್ಲದೆ ಬಳಸಿಕೊಂಡಿದ್ದಕ್ಕೆ ಕೃತಿ ಚೌರ್ಯದ ಆರೋಪವನ್ನು ಅಂತರಾಷ್ಟ್ರೀಯ ಓಶೋ ಫೌಂಡೇಶನ್ ಇಂದ ಎದುರಿಸಬೇಕಾಗಿ ಬಂತು.

ಹಸ್ಮುಕ್

ಈ ವೆಬ್ ಸಿರಿಸ್ ಬಹಳಷ್ಟು ವಿವಾದ ಎಬ್ಬಿಸಿ ಕೋಟ್೯ ಕದವನ್ನು ತಟ್ಟುವಷ್ಟು ವ್ಯಂಗ್ಯ, ಕರಾಳ ಹಾಸ್ಯವನ್ನು ಹೊಂದಿತ್ತು. ಅದರಲ್ಲಿ ವಕೀಲರನ್ನು ಕಳ್ಳರು, ದುಷ್ಕರ್ಮಿಗಳು, ಗೂಂಡಾಗಳು, ಅತ್ಯಾಚಾರಿಗಳು ಎಂಬಂತೆ ಬಿಂಬಿಸಿತ್ತು. ಇದು ನಂತರ ಹೈ ಕೋಟ್೯ ತನಕ ಹೋಗಿ, ವಕೀಲರುಗಳ ಕಣ್ಣುಗಳನ್ನು ಕೆಂಪಾಗಿಸಿದ್ದವು.

ಲೈಲಾ

ಇದು ದೀಪಾ ಮೆಹ್ತಾ ಅವರ ನಿರ್ದೇಶನದ ಕಾದಂಬರಿ ಆಧಾರಿತ ವೆಬ್ ಸಿರೀಸ್ ಆಗಿತ್ತು. ಇದರ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದಾಗ ಧಾರ್ಮಿಕ ವಿಚಾರದಲ್ಲಿ ತೀವ್ರ ವಿರೋಧ ಎದುರಿಸಿತು. ಇದನ್ನು ನಂತರ ನಿಷೇಧಿಸುವ ಆಗ್ರಹಗಳು ಕೇಳಿ ಬಂದಿತ್ತು.

ಚಾರಿತ್ರಹೀನ್

: ಈ ವೆಬ್ ಸಿರೀಸ್ ಶರತ್ ಚಂದ್ರ ಛಟೋಪಾಧ್ಯಾಯ ಅವರು ಬರೆದ ಕಾದಂಬರಿ ಆಧಾರಿತವಾಗಿತ್ತು. ಇದರಲ್ಲಿ ಹಸಿ ಬಿಸಿ ದೃಶ್ಯಗಳೇ ತುಂಬಿತ್ತಾದ್ದರಿಂದ ಸಿಸನ್ 1 ಹಾಗು ಸಿಸನ್ 2 ಎರಡೂ ಕೂಡ ಬಹಳ ಆಕ್ಷೇಪಾರ್ಹವಾಗಿಯೇ ಇದ್ದುವು.

ಗಂದಿಬಾತ್

ಈ ವೆಬ್ ಸಿರೀಸ್ ಕೂಡ 2018ರಲ್ಲಿ ಬಿಡುಗಡೆ ಆಗಿತ್ತು. 4 ಸೀಸನ್ ಗಳಿದ್ದ ದೊಡ್ಡ ಇದ್ದ ಕಂಟೆಂಟ್ ಇದಾಗಿತ್ತು. ಇದು ಕೂಡ ಬರೆಯ ಅಶ್ಲೀಲತೆಯ ದೃಶ್ಯ ಮತ್ತು ಅವಾಚ್ಯ ಸಂಭಾಷಣೆಗಳಿಂದಲೇ ತುಂಬಿತ್ತು.

ಮಿರ್ ಜ಼ಾಪುರ್

ಇದು ಎರಡು ಸೀಸನ್ ಗಳನ್ನು ಹೊಂದಿದ್ದ ಅತಿ ಕ್ರೂರವಾದ ವೆಬ್ ಸಿರೀಸ್ ಆಗಿತ್ತು. ಅದರಲ್ಲಿ ನಟಿಸಿದ ಅಲಿ ಫಜ಼ಲ್ ಸಿ.ಎ.ಎ ಕಾಯ್ದೆ ವಿರುದ್ಧವಾಗಿ ನಡೆಯುತ್ತಿದ್ದ ಕೌರ್ಯಬರಿತ ಅಮಾನವೀಯ ಪ್ರತಿಭಟನೆಗೆ ಕುಮ್ಮಕ್ಕನ್ನು ಟ್ವೀಟ್ ಮಾಡಿ ನೀಡಿದ್ದ. ಆದ್ದರಿಂದ ಮಿರ್ ಜಾ಼ಪುರ್ 2 ಭಾಗದ ಬಿಡುಗಡೆಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಅತಿಯಾದ ಕ್ರೌರ್ಯ, ಅಶಾಂತಿ, ಹಿಂಸಾತ್ಮಕ ದೃಶ್ಯಗಳ ವೈಭವೀಕರಣ, ವಿಕೃತತೆಯನ್ನು ಮೂಡಿಸುವಂತೆ ವೆಬ್ ಸಿರೀಸ್ ಗಳು ಸಿದ್ಧವಾಗಿ ಜನರೆದುರು ಬರುತ್ತಿವೆ.

ಈಗ ಕೇಂದ್ರ ಸರಕಾರ ಕತ್ತರಿ ಪ್ರಯೋಗ ಮಾಡಲು ಚಿಂತಿಸುತ್ತಿದೆ:

ವೆಬ್ ಸಿರೀಸ್ ಗಳು ಹೀಗೆ ಆನ್ ಲೈನ್ ಮಾಧ್ಯಮಗಳಲ್ಲಿ ತಮಗೆ ಹೇಗೆ ಬೇಕೋ ಹಾಗೆ ಸ್ವೇಚಾಚಾರದಿಂದ ಬೇಕಾ ಬಿಟ್ಟಿ ತಮ್ಮ ಸೃಜನಶೀಲತೆ ತೋರಿಸುತ್ತಿದ್ದಾರೆ. ಅದಕ್ಕೆ ಕೇಂದ್ರ ಸರಕಾರ ಈಗ ಎಚ್ಚೆತ್ತು, ಇವುಗಳಿಗೆಲ್ಲಾ ಕತ್ತರಿ ಪ್ರಯೋಗ ಮಾಡಲು ಚಿಂತಿಸುತ್ತಿದೆ. ಅತ್ಯಂತ ಹೆಚ್ಚಿನ ವಿವಾದಗಳನ್ನು ಸೃಷ್ಟಿಸುತ್ತಿರುವ ವೆಬ್ ಸಿರೀಸ್ ಗಳು ಸಮಾಜ ಘಾತುಕವಾಗಿ ಜನರ ಸಂವೇದನಾಶೀಲತೆಯನ್ನು ಇಲ್ಲವಾಗಿಸಲು ಯತ್ನಿಸುತ್ತಿವೆ. ಇದು ಯುವ ಜನರಿಗೆ ಮಾನಸಿಕವಾಗಿ ಅತಿ ಹೆಚ್ಚು ನಕಾರಾತ್ಮಕ ಪರಿಣಾಮಗಳನ್ನು ಬೀರುವ ಅಪಾಯವಿದೆ. ವೆಬ್ ಸಿರೀಸ್ ಗಳಿಗೆ Central Board Of Film Certification(CBFC) ಅಥವಾ ಸೆನ್ಸಾರ್ ಬೋಡ್೯ ಇಂದ ಪ್ರಮಾಣ ಪತ್ರ ತೆಗೆದುಕೊಳ್ಳಲು ಕತ್ತರಿ ಪ್ರಯೋಗ ಮಾಡಿಸಿಕೊಳ್ಳಬೇಕು ಎಂಬ ಕಾನೂನು ಜಾರಿಗೆ ತರಲು ಹೊರಟಿದೆ.

ನಿಜ ಯಾವುದೇ ನಿರ್ಬಂಧಗಳಿಲ್ಲವೆಂದು ಸ್ವೇಚಾಚಾರದಲ್ಲಿ ಒಟಿಟಿ ಪ್ಲಾಟ್ ಫಾರಂಗಳು ವೆಬ್ ಸಿರೀಸ್ ಗಳನ್ನು ತಯಾರಿಸಿ, ಜನರೆದುರಿಗಿಡುತ್ತಿರುವುದು ತೀರಾ ಆತಂಕಕಾರಿ ವಿಚಾರ. ಕುಲ್ಲಂಕುಲ್ಲಾ ಕಾಮ, ರಕ್ತಪಾತದ ತಣ್ಣಗಿನ ಕೌರ್ಯ ಪ್ರಚೋದಕ ದೃಶ್ಯಗಳಿಂದ ಜನರಿಗೆ ಅತಿ ಕೀಳು ಮಟ್ಟದ ಮನೋರಂಜನೆ ನೀಡುತ್ತಿರುವುದು ವಿಪರ್ಯಾಸ. ನಟ್ ನಿಂದ ಬಳಸುವ ನೆಟ್ ಫ್ಲಿಕ್ಸ್ ನಂತಹ ಆನ್ ಲೈನ್ ಮನೋರಂಜನಾ ವಿಚಾರಗಳು ಸರಕಾರ ಕಾನೂನು ರಚಿಸಿದ ನಂತರ ನೆಟ್ಟಗಾಗಲಿವೆಯೇ ಕಾದು ನೋಡಬೇಕಿದೆ.

ರಜತ್ ರಾಜ್ ಡಿ.ಹಚ್,
ಸುದ್ದಿ ಸಂತೆ ಸಂಪಾದಕರು
7483226251
error: Content is protected !!